HomePage_Banner_
HomePage_Banner_

ಬೆಳ್ತಂಗಡಿ : ಶಹರೀ ಸಮ್ರಧ್ಧಿ ಉತ್ಸವದನ್ವಯ ಮಾಹಿತಿ ಶಿಬಿರ

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತು ವ್ಯಾಪ್ತಿಯಲ್ಲಿ ಶಹರೀ ಸಮ್ರಧ್ಧಿ ಉತ್ಸವದನ್ವಯ,ಜಾಥಾ  ಕಾರ್ಯಕ್ರಮ, ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ  ಮಾಹಿತಿ ಕಾರ್ಯಾಗಾರ ಹಾಗೂ ಸೌಲಭ್ಯ ವಿತರಣಾ ಕಾರ್ಯಕ್ರಮವು    ಫೆ.15 ರಂದು ಇಲ್ಲಿನ‌ ಅಂಬೇಡ್ಕರ್ ಭವನದಲ್ಲಿ ಜರುಗಿತು .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಭಾಗವಹಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಶ್ರೀಮತಿ ಐರಿನ್ ರೆಬೆಲ್ಲೋ , ವಿಶ್ವನಾಥ ರಾವ್,  ತನೂಯ೯ , ಶ್ರೀಮತಿ ಉಷಾ ಕಾಮತ್ ಹಾಗೂ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ , ನಗರ ಬಡತನ ನಿರ್ಮೂಲನಾ ಕಾರ್ಯಕ್ರಮದ ಅನ್ವಯ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಾದ ಡೇ..ನಲ್ಮ್,  ವಾಜಪೇಯಿ ನಗರ ಆಶ್ರಯ, ಹೌಸಿಂಗ್ ಫಾರ್ ಆಲ್, ಬೀದಿ ಬದಿ ವ್ಯಾಪಾರ ವಹಿವಾಟು ನಡೆಸುವವರಿಗೆ ಗುರುತು ಚೀಟಿ ಮತ್ತು ಸೌಲಭ್ಯ ಕುರಿತು, ಬ್ಯಾಂಕ್ ವ್ಯವಹಾರ ಮತ್ತು ಇತರ ಸಾಮಾಜಿಕ ಭದ್ರತೆ ಯೋಜನೆ, ನಗರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಾಮಾಜಿಕ ‌ಸ್ವಾಸ್ಥ್ಯ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರತಿಪಾದಿಸಿ ವಿವಿಧ ರೀತಿಯ ವಿವರಗಳನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮತಿ ಮಲ್ಲಿಕಾ ವಹಿಸಿ ದ್ದರು.  ಶ್ರೀಮತಿ ಮಂಜುಳಾ, ಮೆಟಿಲ್ಡಾ ಡಿ ಕೋಸ್ತಾ, ಸಚಿನ್, ಜಗದೀಶ್, ತೆರೆಸಾ ಲೋಬೋ, ನ.ಪಂ.ಸದಸ್ಯರಾದ  ಜನಾರ್ದನ,  ಜಗದೀಶ್ . ಡಿ , ರಜನಿ ಕುಡ್ವ ಹಾಗೂ ಮತ್ತಿತರರು  ಭಾಗ ವಹಿಸಿದ್ದರು.

ಸಮುದಾಯ ವ್ಯವಹಾರ ಅಧಿಕಾರಿ ವೆಂಕಟರಮಣ ಶಮ೯ ಸ್ವಾಗತಿಸಿ,ಕಾಯ೯ಕ್ರಮ ನಿರೂಪಿಸಿ, ವಂದಿಸಿದರು. ಫಲಾನುಭವಿಗಳು ಮತ್ತು ಸ್ವಸಹಾಯ ಗುಂಪುಗಳ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಯೋಜನೆ ಯೋಜನೆ ಮಹತ್ವದ ಪರಿಚಯ ಮಾಡಿಕೊಟ್ಟರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.