ಉಜಿರೆ: ಹುತಾತ್ಮ ಯೋಧರಿಗೆ ಸಂತಾಪ ಸೂಚನಾ ಮೆರವಣಿಗೆ, ಶ್ರದ್ದಾಂಜಲಿ ಸಭೆ

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಯವರ ನೇತ್ರತ್ವದಲ್ಲಿ ಮಡಿದ ಹುತಾತ್ಮ ಯೋಧರಿಗೆ ಸಂತಾಪ ಸೂಚನಾ ಮೆರವಣಿಗೆ ಹಾಗೂ ಶ್ರದ್ದಾಂಜಲಿ ಸಭೆ

ಶ್ರೀ ಕ್ಷೇತ್ರ ಕುಂಜರ್ಪದಿಂದ ಪಂಜಿನ ಮೆರವಣಿಗೆ ಆರಂಭಗೊಂಡು, ಬೆಳಾಲು ಕ್ರಾಸ್ ರಸ್ತೆಯವರೆಗೆ ಸಾಗಿ, ನಂತರ ಉಜಿರೆ ಬಸ್ ಸ್ಟ್ಯಾಂಡ್‌ನಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಸಭೆಯು ಜರುಗಿತು.

ಬೆಳ್ತಂಗಡಿ : ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರದಲ್ಲಿ ಫೆ.14 ರಂದು ನಡೆದ ಉಗ್ರರ ಹೀನ ಕೃತ್ಯಕ್ಕೆ ಭಾರತದ ವೀರ ಯೋಧರು ಬಲಿಯಾಗಿದ್ದು, ಉಗ್ರರ ಈ ಕೃತ್ಯವನ್ನು ಖಂಡಿಸಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಯವರ ನೇತ್ರತ್ವದಲ್ಲಿ ಮಡಿದ ಹುತಾತ್ಮ ಯೋಧರಿಗೆ ಸಂತಾಪ ಸೂಚನಾ ಮೆರವಣಿಗೆ ಹಾಗೂ ಶ್ರದ್ದಾಂಜಲಿ ಸಭೆಯು ಫೆ.15 ರಂದು ಉಜಿರೆ ಬಸ್ ನಿಲ್ದಾಣದಲ್ಲಿ  ನಡೆಯಿತು.

ಶ್ರೀ ಕ್ಷೇತ್ರ ಕುಂಜರ್ಪದಿಂದ ಪಂಜಿನ ಮೆರವಣಿಗೆ ಆರಂಭಗೊಂಡು, ಬೆಳಾಲು ಕ್ರಾಸ್ ರಸ್ತೆಯವರೆಗೆ ಸಾಗಿ, ನಂತರ ಉಜಿರೆ ಬಸ್ ಸ್ಟ್ಯಾಂಡ್‌ನಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಸಭೆಯು ಜರುಗಿತು. ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ, ಹಿಂ.ಜಾ.ವೇ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಮುಖರಾದ ರವಿಕುಮಾರ್ ಬರಮೇಲು, ನಿವೃತ್ತ ಸಾಧಕ ಸೇನಾನಿ ಕಾಂಚೋಡು ಗೋಪಾಲಕೃಷ್ಣ ಭಟ್, ನಿವೃತ್ತ ಯೋಧರುಗಳು , ಇನ್ನಿತರ ಗಣ್ಯರು, ಹಿಂ.ಜಾ.ವೇ ಸದಸ್ಯರು , ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ   ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.