ಗಾಂಧಿ ನೆಹರು ಮತ್ತು ಅಂಬೇಡ್ಕರ್ ವಿಚಾರ ಧಾರೆಗಳ ಅಭಿವೃದ್ಧಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬೆಳ್ತಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ , ಹೈದರಾಬಾದ್ ಐಸಿಎಸ್‌ಎಸ್‌ಆರ್ ಸಹಭಾಗಿತ್ವದೊಂದಿಗೆ ಗಾಂಧಿ ನೆಹರು ಮತ್ತು ಅಂಬೇಡ್ಕರ್ ವಿಚಾರ ಧಾರೆಗಳ ಅಭಿವೃದ್ಧಿ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ಫೆ. 15  ರಂದು  ಜರುಗಿತು.

ಉದ್ಘಾಟನೆಯನ್ನು ರಾಯಚೂರು ವಿವಿ ವಿಶೇಷ ಅಧಿಕಾರಿ ಪ್ರೋ| ಮುಜಾಫರ್ ಅಸ್ಸಾದಿ ನೆರವೇರಿಸಿದರು. ಐಸಿಎಸ್‌ಎಸ್‌ಆರ್ ನ ನಿರ್ದೇಶಕ ಡಾ|| ಚನ್ನಬಸಯ್ಯ ಹಾಗೂ ಹಿರಿಯ ವಿದ್ವಾಂಸ ಪ್ರೋ ಕೆ. ಶ್ರೀನಿವಾಸಲು , ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೋ ಜಯರಾಜ್ ಅಮೀನ್, ಪ್ರೊಫೆಸರ್‌ಗಳಾದ ಡಾ| ಪಿ.ಎಲ್.ಧರ್ಮ, ರಾಜರಾಮ ತೋಳ್ಪಾಡಿ, ಕೇರಳ ವಿಶ್ವವಿದ್ಯಾನಿಲಯದ ಪ್ರೊ. ಶಾಜಿ ವರ್ಕಿ, ಹೈದರಾಬಾದ್ ಉಸ್ಮಾನಿಯ ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಕೆ. ಶ್ರೀನಿವಾಸುಲು ಉಪಸ್ಥಿತರಿದ್ದು ,  ವಿಚಾರ ಸಂಕಿರಣದಲ್ಲಿ ಗಾಂಧಿ ನೆಹರು ಮತ್ತು ಅಂಬೆಡ್ಕರ್ ಅವರ ವಿಚಾರ ಧಾರೆಗಳ ಅಭಿವೃದ್ಧಿ ಆಧುನಿಕತೆ ಮತ್ತು ರಾಷ್ಟ್ರ ನಿರ್ಮಾಣ ಕುರಿತ ಚಿಂತನೆಗಳ ವಿಶ್ಲೇಷಣೆ, ಸಂವಾದದಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಪಿ ಆಂಟೊನಿ   ಪ್ರಾಧ್ಯಾಪಕರಾದ ಡಾ| ಸುಬ್ರಹ್ಮಣ್ಯ, ಡಾ| ಟಿ.ಕೆ ಶರತ್ ಕುಮಾರ್, ಪ್ರೊ| ರಾಘವ ಎನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

v

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.