ಬೆಳ್ತಂಗಡಿ: ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿ ರಣರಂಗದಲ್ಲೆ ಪ್ರಾಣಾರ್ಪಣೆಗೈದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಜೀವನಗಾಥೆ, ಸಾಮಾನ್ಯ ಮಹಿಳೆಯ ಅಸಾಮಾನ್ಯ ಕತೆಯನ್ನೊಳಗೊಂಡ “ದೇಯಿ ಬೈದೆತಿ” -ಗೆಜ್ಜೆಗಿರಿ ನಂದನೂಡು.. ತುಳು ಚಲನಚಿತ್ರ ಬಿಡುಗಡೆ ಕಾರ್ಯಕ್ರಮವು ಬೆಳ್ತಂಗಡಿಯಲ್ಲಿ ಫೆ.15ರಂದು ನಡೆಯಿತು. ಮಾಜಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಎಸ್.ಪಿ ಪಿತಾಂಬರ ಹೇರಾಜೆ, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ನ.ಪಂ ಸದಸ್ಯರಾದ ಜಗದೀಶ್.ಡಿ, ತುಳಸಿ ಕರುಣಾಕರ, ರಾಜಶ್ರೀ ರಮಣ್, ಸಂಘಟನಾ ಕಾರ್ಯದರ್ಶಿ ಸಚಿನ್ ನೂಜೋಡಿ, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಯುವವಾಹಿನಿ ಮಾಜಿ ಅಧ್ಯಕ್ಷ ಸದಾನಂದ ಉಂಗಿಲಬೈಲು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಉಪ್ಪಾರು, ಯುವವಾಹಿನಿ ನಿಯೋಜಿತ ಅಧ್ಯಕ್ಷ ಹರೀಶ್ ಸುವರ್ಣ, ಚಲನಚಿತ್ರ ಸಂಚಾಲಕ ಸುನೀಲ್ ಕಲ್ಮಂಜ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ ಸಾಲ್ಯಾನ್, ರಾಕೇಶ್ ಮೂಡುಕೋಡಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.