ಧರ್ಮಸ್ಥಳ: ಗ್ರಂಥ ಬಿಡುಗಡೆ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಜೈನಧರ್ಮದ ಬಾಹುಬಲಿ ಅಹಿಂಸಾ ದಿಗ್ವಿಜಯಂ ಗದ್ಯಾನುವಾದದ ಗ್ರಂಥ ಬರೆಯುವಾಗ ನನ್ನನ್ನು ನಾನು ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಯಿತು. ಬಾಹುಬಲಿ ಅಹಿಂಸೆ, ಪ್ರೀತಿ, ಶಾಂತಿ, ತ್ಯಾಗ, ಸಂಯಮದ ಸಾಕಾರ ಮೂರ್ತಿ. ಕ್ರೋಧದ ಕಾವಿನ ಎದುರು ನಾವು ಶಾಂತವಾಗಿದ್ದರೆ ನಮಗೆ ಸದಾ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಹೇಳಿದರು. ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ  ಪ್ರಯುಕ್ತ   ಅಮೃತವರ್ಷಿಣಿಯಲ್ಲಿ  ಫೆ.14 ರಂದು  ನಡೆದ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

 

ಕಾರ್ಯಕ್ರಮದಲ್ಲಿ ಕಮಲಾ ಹಂಪನಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಉಪಸ್ಥಿತರಿದ್ದರು. ರಾಜಶ್ರೀ ಎಸ್. ಹೆಗ್ಡೆ ಸ್ವಾಗತಿಸಿದರು. ವೇಣೂರಿನ ವಿಜಯರಾಜ ಅತಿಕಾರಿ ಧನ್ಯವಾದವಿತ್ತರು. ಕುಮಾರಿ ಶ್ರುತಿ ಜೈನ್ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು.

ಆದಿಪುರಾಣ ಗ್ರಂಥವನ್ನು ಪೂಜ್ಯ ಸಿದ್ಧಸೇನಾಚಾರ್ಯ ಮುನಿಮಹಾರಾಜರು ಬಿಡುಗಡೆಗೊಳಿಸಿದರು. ಬಂಟ್ವಾಳದ ಇರ್ವತ್ತೂರು ಬೀಡು ವಿಜಯಾ ಜಿ. ಜೈನ್ ಬರೆದ ಧರ್ಮಸ್ಥಳದ ಶ್ರೀ ಗೊಮ್ಮಟೇಶ್ವರ ಚರಿತ್ರೆ ಕೃತಿಯನ್ನು ಪೂಜ್ಯ ವೀರ ಸಾಗರ ಮುನಿ ಮಹಾರಾಜರು ಬಿಡುಗಡೆಗೊಳಿಸಿದರು.
ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, 1959 ರಲ್ಲಿ ಧರ್ಮಸ್ಥಳದಲ್ಲಿ ತಾನು ಮಾಡಿದ ಮೊದಲ ಭಾಷಣವನ್ನು ಧನ್ಯತೆಯಿಂದ ಸ್ಮರಿಸಿ ವೀರೇಂದ್ರ ಹೆಗ್ಗಡೆಯವರ ಕುಟುಂಬದವರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಗುರುವಾರ ನಡೆದ  ಚಪ್ಪರ ಕುಸಿತ  ಆಕಸ್ಮಿಕ ಘಟನೆಯ ಬಗ್ಗೆ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಇಲ್ಲಿ ಅನೇಕ ವಿಸ್ಮಯಗಳು ನಡೆಯುತ್ತವೆ. ಆದರೆ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಧರ್ಮ ದೇವತೆಗಳ ಅನುಗ್ರಹದಿಂದ ನಾವು ಯೋಚಿಸಿದ, ಯೋಜಿಸಿದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಹಲವಾರು ಪೂಜ್ಯ ಮುನಿಗಳ ದಿವ್ಯ ಸಾನ್ನಿಧ್ಯ, ಧ್ಯಾನ ಮತ್ತು ತಪದ ಫಲವಾಗಿ ಕ್ಷೇತ್ರದಲ್ಲಿ ವಿಶೇಷ ಶಕ್ತಿ ಜಾಗೃತವಾಗಿದೆ. ಇಂದು ಎಲ್ಲರೂ ಅಪಪಾಯದಿಂದ ಪಾರಾಗಿದ್ದೇವೆ. ಇದು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಕಳೆದ ಇಪ್ಪತ್ತು ದಿನಗಳಿಂದಲೆ ತನ್ನ ಮನದಲ್ಲಿ ಶಂಕೆ ಇತ್ತು. ಜ್ಯೋತಿಷರಲ್ಲಿ ವಿಮರ್ಶೆ ಮಾಡಿದಾಗ ಒಂದು ಪೂಜೆ ಮಾಡಿಸಲು ಸಲಹೆ ನೀಡಿದ್ದರು. ಅಪಾಯದ ತೀವ್ರತೆ ಕಡಿಮೆಯಾಗುತ್ತದೆ ಎಂದೂ ಅವರು ತಿಳಿಸಿದ್ದರು ಎಂದು ಹೆಗ್ಗಡೆಯವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.