ಉಜಿರೆ: ಬೆನಕ ಆಸ್ಪತ್ರೆಗೆ ಇಸಿಜಿ ಯಂತ್ರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ವರ್ಷಕ್ಕೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿಡಾ.ಪದ್ಮನಾಭ ಕಾಮತ್

ಉಜಿರೆ: ದೇಹದ ಯಾವುದೇ ಭಾಗದ ರಕ್ತನಾಳಗಳಲ್ಲಿನ ಅಡಚಣೆ ತುಂಬಾ ಅಪಾಯಕಾರಿ. ಅದರಲ್ಲಿಯೂ ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿನ ಅಡಚಣೆ ಜೀವಕ್ಕೆ ಸಂಚಕಾರವನ್ನು ಒಡ್ಡಬಹುದು. ವ್ಯಕ್ತಿಯ ರಕ್ತನಾಳಗಳಲ್ಲಿನ ಅಡಚಣೆಯನ್ನು ಮೊದಲೇ ಪತ್ತೆ ಹಚ್ಚಿ ಅದನ್ನು ಸರಿಪಡಿಸಬಹುದಾಗಿದೆ. ವರ್ಷಕ್ಕೊಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿ. ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ. ಪರೀಕ್ಷೆಯೂ ಅದರಲ್ಲಿರಲಿ ಎಂದು ಮಂಗಳೂರಿನ ಕೆ.ಎಂ.ಸಿ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಕರೆ ನೀಡಿದರು.

ಅವರು ಆರ್ಥಿಕವಾಗಿ ಅಶಕ್ತರಿಗೆ ಮಿತದರದಲ್ಲಿ ಇಸಿಜಿ ಸೌಲಭ್ಯವನ್ನು ಒದಗಿಸಲು ಉಜಿರೆಯ ಬೆನಕ ಆಸ್ಪತ್ರೆಗೆ ಇತ್ತೀಚೆಗೆ ಇಸಿಜಿ ಯಂತ್ರವನ್ನು ಹಸ್ತಾಂತರಿಸುತ್ತಾ ಮಾತನಾಡಿದರು.

ಇಸಿಜಿ ಪರೀಕ್ಷೆಯು ಅಪಾಯರಹಿತ, ಕಡಿಮೆ ಬೆಲೆಯ ಮತ್ತು ಸುಲಭವಾಗಿ ನಡೆಸಬಹುದಾದ ಪರೀಕ್ಷೆಯಾಗಿದ್ದು ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ದೊರೆಯಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ಮಿತ ದರದಲ್ಲಿ ಇಸಿಜಿ ಪರೀಕ್ಷೆಯ ಸೇವೆಯನ್ನು ಒದಗಿಸಲಾಗುವುದು ಎಂದು ಉಜಿರೆಯ ಬೆನೆಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ತಿಳಿಸಿದರು.

ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮೂಳೆ ವೈದ್ಯ ಡಾ. ಶಶಾಂಕ್ ಕುಂಬ್ಳೆ , ಮಕ್ಕಳ ವೈದ್ಯ ಡಾ. ಗೋವಿಂದ ಕಿಶೋರ್ ,ಸ್ತ್ರೀ ರೋಗ ತಜ್ಞೆ ಡಾ. ವಿನಯ ಕಿಶೋರ್, ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರು ದೇವಸ್ಯ ವರ್ಗೀಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದು , ಡಾ.ಭಾರತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.