ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿಯಲ್ಲಿ ವರ್ಷಾವಧಿ ನೇಮೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಶಿಶಿಲ : ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಶಿಶಿಲ ಇಲ್ಲಿ ವರ್ಷಾವಧಿ ನೇಮೋತ್ಸವು ಫೆ. 6 ರಿಂದ 9 ರವರೆಗೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಗಣಹೋಮ, ನಾಗತಂಬಿಲ, ಮಾಕಲಬ್ಬೆ ತಂಬಿಲ, ಬ್ರಹ್ಮಬೈದರ್ಕಳ ದೈವಗಳಿಗೆ ತಂಬಿಲ ಸೇವೆ ಹಾಗೂ ಗ್ರಾಮಸ್ಥರಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ತೋರಣ ಮುಹೂರ್ತ, ಧರ್ಮರಸು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ, ಶಿರಾಡಿ ದೈವ, ಕೊಡಮಂದಾಯ, ಪಂಜುರ್ಲಿ, ಸತ್ಯ ಜಾವತೆ ನೇಮ, ಕಲ್ಕುಡ ಕಲ್ಲುರ್ಟಿ ನೇಮ, ಲೆಕ್ಕಸಿರಿ ಬಾವನ ನೇಮ, ಪರಿವಾರ ದೈವಗಳ ನೇಮ, ಪಿಲಿಕಲ್ತಾಯ ನೇಮ, ಬಿರ್ಮೆರ್, ಶಿರಾಡಿ ದೈವಗಳು ಪರಿವಾರ ನೇಮ, ಕೊಡಮಂದಾಯ ನೇಮ, ಪಂಜುರ್ಲಿ, ಮಾಲದ ಕೊರಗ ನೇಮ, ಬಚ್ಚನಾಯಕ ಹಾಗೂ ಗುಳಿಗ ನೇಮ, ಬೈದೇರುಗಳ ಗರಡಿ ಇಳಿಯುವುದು,ದೇಯಿ ಬೈದಿತಿ ನೇಮ ಹಾಗೂ ಬೈದೇರುಗಳ ಭೇಟಿ, ಮಾನಿಬಾಲೆ ಗರಡಿ ಇಳಿಯುವುದು, ಸುರಿಯ ಹಾಕುವುದು ಹರಿಕೆ ಮತ್ತು ಗಂಧ ಪ್ರಸಾದ ನಡೆಯಿತು.
ಕ್ಷೇತ್ರದ ಅನುವಂಶೀಯ ಧರ್ಮದರ್ಶಿ ಜನಾರ್ಧನ ಬಂಗೇರ, ಮಂಗಳೂರು ಕಂಕನಾಡಿ ಗರಡಿಯ ಧರ್ಮದರ್ಶಿ ಚಿತ್ತರಂಜನ್, ಹಾಗೂ ಊರ-ಪರವೂರ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.