ಕರಾವಳಿಯ ಮೂರು ಕಲಾವಿದರಿಗೆ ಸುವರ್ಣ ರಂಗ ಸಮ್ಮಾನ್-2019

ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಕರಾವಳಿಯ ಉಭಯ ಜಿಲ್ಲೆಗಳ ಹೆಸರಾಂತ ಕಲಾವಿದರುಗಳ ಕಲಾ ಪ್ರತಿಭೆಯನ್ನು ಗೌರವಿಸುವ ಸುವರ್ಣ ರಂಗ ಸಮ್ಮಾನ್ 2019 ಪರಸ್ಕಾರ ಈ ಬಾರಿ ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಕನ್ನಡದ ಖ್ಯಾತ ಕಿರುತೆರೆ /ಚಲನಚಿತ್ರ ನಟಿ ಜ್ಯೋತಿ ರೈ ಹಾಗೂ ದೇಯಿಬೈದೇತಿ ಚಲನಚಿತ್ರ ನಿರ್ದೇಶಕ ಸುರ್‍ಯೋದಯ ಪೆರಂಪಳ್ಳಿ ಇವರಿಗೆ ಫೆ. 20 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಜರುಗಲಿರುವ ೯ನೇ ವರ್ಷದ ಸಾಂಸ್ಕೃತಿಕ ಕಲಾವೈಭವದ ವೇದಿಕೆಯಲ್ಲಿ ಗಣ್ಯರ ಸಮ್ಮುಖ ಪ್ರಧಾನ ಮಾಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ನೃತ್ಯ ಪ್ರತಿಭೆ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಜೀ, ಸ್ಟಾರ್ ಪ್ಲಸ್‌ಗಳ ಕುಣಿಯೋಣ ಬಾರಾ, ಡಿಐಡಿ, ಲಿಟ್ಲ್ ಮಾಸ್ಟರ್‍ಸ್, ಇಂಡಿಯನ್ ಡಾನ್ಸಿಂಗ್ ಸೂಪರ್ ಸ್ಟಾರ್ ಮುಂತಾದ ಕಾರ್‍ಯ ಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡ ಮಂಗಳೂರು ಇವರಿಂದ ಅಮೋಘ ಭಾರತೀಯ ನೃತ್ಯ ವೈಭವ ಕಲಾ ಉತ್ಸವ ಜರುಗಲಿದೆ. ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಂಪತ್ .ಬಿ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.