ಜಿಲ್ಲೆಯಲ್ಲಿ 115ನೀರು ಶುದ್ಧೀಕರಣ ಘಟಕ ರಚನೆ: ಎಂ.ಎಲ್.ಸಿ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರ ಉತ್ತರ 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಗ್ರಾಮೀಣ ಜನವಸತಿಗಳಲ್ಲಿ ನೀರು ಶುದ್ಧೀಕರಣ ಘಟಕಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2015-16ರಿಂದ 2017-18ನೇ ಸಾಲಿನ ತನಕ ಒಟ್ಟು 227 ಘಟಕಗಳು ಮಂಜೂರಾಗಿದ್ದು, ಇದರಲ್ಲಿ ಜಿ.ಪಂ ನಿರ್ಣಯದಂತೆ 29 ಕಾಮಗಾರಿಗಳು ಮತ್ತು ಕೆ.ಆರ್.ಐ.ಡಿ.ಎಲ್ ಸಂಸ್ಥೆ ಮೂಲಕ ನಿವೇಶನ ಸಮಸ್ಯೆಯಿಂದಾಗಿ 47 ಕಾಮಗಾರಿಗಳನ್ನು ಸೇರಿದಂತೆ ಒಟ್ಟು77 ಕಾಮಗಾರಿಗಳನ್ನು ಕೈಬಿಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇ ಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದ.ಕ ಜಿಲ್ಲೆಗೆ ಕಾಮಗಾರಿ ಅನುಷ್ಠಾನಕ್ಕೆ ಆರ್.ಡಬ್ಲೂ.ಎಸ್ ಮತ್ತು ಕೆಆರ್‌ಐಡಿಎಲ್ ಇಲಾಖೆ ಮೂಲಕ ಒಟ್ಟು1064.336 ಲಕ್ಷ ಅನುದಾನ ಮಂಜೂರಾಗಿದ್ದು, ಇದರಲ್ಲಿ ರೂ766.99 ಲಕ್ಷ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ದ.ಕ ಜಿಲ್ಲೆಯಲ್ಲಿ 115 ನೀರು ಶುದ್ಧೀಕರಣ ಘಟಕ ರಚನೆಯಾಗಿದ್ದು, ಇವುಗಳಲ್ಲಿ 87 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 28 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಟಾಸ್ಕ್‌ಫೋರ್ಸ್, ಎನ್‌ಆರ್‌ಡಿಡಬ್ಲೂಪಿ ಹಾಗೂ ಇತರೆ ಅನುದಾನ ಬಳಸಿಕೊಂಡು ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಅಳದಂಗಡಿ ಗ್ರಾ.ಪಂ ವ್ಯಾಪ್ತಿಯ ಸುಲ್ಕೇರಿ, ಕುಕ್ಕೇಡಿ ಗ್ರಾ.ಪಂ ವ್ಯಾಪ್ತಿಯ ಗೋಳಿಯಂಗಡಿ, ಕುವೆಟ್ಟು ಗ್ರಾ.ಪಂ ವ್ಯಾಪ್ತಿಯ ಮದ್ದಡ್ಕ, ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯ ಮಡಂತ್ಯಾರು, ಆರಂಬೋಡಿ, ಮಾಲಾಡಿ ಪಣಕಜೆ, ವೇಣೂರು, ಬಜಿರೆ ಕಾರ್ಯನಿರ್ವಹಿಸುತ್ತಿದೆ. ಅಳದಂಗಡಿ, ವೇಣೂರು, ಪಡಂಗಡಿ ಪೊಯ್ಯೆಗುಡ್ಡೆ, ಕಳಿಯ ಗ್ರಾ.ಪಂದ ಜಾರಿಗೆಬೈಲು, ನಡ ಗ್ರಾ.ಪಂದ ಕನ್ಯಾಡಿ ದೊಂಪದಪಲಿಕೆ, ಧರ್ಮಸ್ಥಳ ಗ್ರಾ.ಪಂದ ಕನ್ಯಾಡಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳ ಸುಸ್ಥಿತಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗಿಳಿಕಾಪು ಕಿಂಡಿ ಅಣೆಕಟ್ಟು: ತೆಂಕಕಾರಂದೂರು ಗ್ರಾಮದ ಗಿಳಿಕಾಪು ಕಿಂಡಿ ಅಣೆಕಟ್ಟು ಕಳಪೆ/ಅಪೂರ್ಣ ಕಾಮಗಾರಿಯಾಗಿರುವ ಬಗ್ಗೆ ಹರೀಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಅವರು ತೆಂಕಕಾರಂದೂರು ಗ್ರಾಮದ ಗಿಳಿಕಾಪು ಎಂಬಲ್ಲಿ ಕಿಂಡಿಅಣೆಕಟ್ಟು 2006 ರಲ್ಲಿ ಪೂರ್ಣಗೊಂಡಿದೆ. ಇಲ್ಲಿಯವರೆಗೂ ಪ್ರತಿ ವರ್ಷ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ ನಿರ್ವಹಿಸಲಾಗುತ್ತಿದೆ. ಕಿಂಡಿಅಣೆಕಟ್ಟಿನ ಕೆಲವೊಂದು ಹಲಗೆಗಳು ಶಿಥಿಲಗೊಂಡಿದ್ದು, ಈ ಹಲಗೆಗಳನ್ನು ಬದಲಾಯಿಸಿ, ಹೊಸ ಹಲಗೆಗಳನ್ನು ಅಳವಡಿಸುವುದು ಅವಶ್ಯವಿದ್ದು, ಸದರಿ ಸಾಲಿನ ಅನುದಾನದಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.