ಪಂಚಮಹಾವೈಭವ: ಅಯೋಧ್ಯಾ ನಗರಿಯ ರಂಗೇರಿದ ದಿಗ್ವಿಜಯ ಯಾತ್ರೆ

ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿ ರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ.13ರಂದು ಪಂಚಮಹಾವೈಭವ ಮಂಟಪದಲ್ಲಿ ಭರತನ ಆಸ್ಥಾನ ವೈಭವ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಹಾಗೂ ಧರ್ಮಸ್ಥಳದಿಂದ ಶಾಂತಿವನದ ವರೆಗೆ ದಿಗ್ವಿಜಯ ಮೆರವಣಿಗೆಯ ರೂಪಕ ಪ್ರದರ್ಶನ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು.

ಸೈನಿಕರು (100 ಮಂದಿ)

ವೈಭವೋಪೇತ ಮೆರವಣಿಗೆಯೊಂದಿಗೆ ಪಂಚಮಹಾವೈಭವ ಮಂಟಪದಿಂದ ಹೊರಟ ದಿಗ್ವಿಜಯ ಶಾಂತಿವನ ತಲುಪುತ್ತದೆ. ಮಾರ್ಗ ಇಕ್ಕೆಲಗಳಲ್ಲಿಯೂ ಸಹಸ್ರಾರು ಮಂದಿ ದಿಗ್ವಿಜಯದ ವೈಭವವನ್ನು ಕಣ್ತುಂಬಿಕೊಂಡರು. ಸಂಜೆ ಅಯೋಧ್ಯೆಗೆ ವಿಜಯೀ ಭರತೇಶನ ಮರು ಪಯಣದ ವೈಭಪೋಪೇತ ಮೆರವಣಿಗೆ ನಡೆಯಿತು.

ಗುರಾಣಿ ಹಿಡಿದ ಸೈನಿಕರು

ನಗಾರಿ, ಡೊಳ್ಳುಕುಣಿತ
ಕಾಡು ಮನುಷ್ಯರು (102 ಮಂದಿ)
ಜಾನಪದ ಶೈಲಿಯ ವಾಲಗ, ಕೊಂಬು

ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿ ರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಫೆ.13ರಂದು ಪಂಚಮಹಾವೈಭವ ಮಂಟಪದಲ್ಲಿ ಭರತನ ಆಸ್ಥಾನ ವೈಭವ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಹಾಗೂ ಧರ್ಮಸ್ಥಳದಿಂದ ಶಾಂತಿವನದ ವರೆಗೆ ದಿಗ್ವಿಜಯ ಮೆರವಣಿಗೆಯ ರೂಪಕ ಪ್ರದರ್ಶನ ಅತ್ಯಂತ ಆಕರ್ಷಕವಾಗಿ ಮೂಡಿ ಬಂತು.
ಭರತನ ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸುತ್ತದೆ. ಒಂದು ದಿನ ಆತನಿಗೆ ಮೂರು ಶುಭ ಸುದ್ದಿಗಳು ಏಕ ಕಾಲಕ್ಕೆ ಸಿಗುತ್ತವೆ. ತನ್ನ ತಂದೆ ವೃಷಭನಾಥರಿಗೆ ಕೇವಲ ಜ್ಞಾನ ಪ್ರಾಪ್ತಿ, ಆಯುಧಾ ಗಾರದಲ್ಲಿ ಚಕ್ರರತ್ನ
ಉದಯ ಮತ್ತು ಆತನ ರಾಣಿ ಗಂಡು ಮಗುವಿಗೆ ಜನ್ಮ ನೀಡಿರುವುದು. ಭರತನು ಮೊದಲು ಕೇವಲ ಜ್ಞಾನ ಪ್ರಾಪ್ತಿ ಮಾಡಿದ ವೃಷಭನಾಥರ ದರ್ಶನ ಮಾಡುತ್ತಾನೆ. ಬಳಿಕ ಆಯುಧಾಗಾರಕ್ಕೆ ಹೋಗಿ ಚಕ್ರರತ್ನವನ್ನು ಪೂಜಿಸುತ್ತಾನೆ. ಅಂದಿನಿಂದ ಒಂಬತ್ತು ದಿನಗಳವರೆಗೆ ಉತ್ಸವವನ್ನು ನವರಾತ್ರಿ ಉತ್ಸವವಾಗಿ ಆಚರಿಸಬೇಕು ಎಂದು ಪ್ರಜೆಗಳಿಗೆ ಆದೇಶ ನೀಡುತ್ತಾನೆ. ನಂತರ ಭರತ ರಾಣಿ ಮತ್ತು ಮಗನನ್ನು ನೋಡಲು ಹೋಗುತ್ತಾನೆ. ಮಗನಿಗೆ ಅರ್ಕಕೀರ್ತಿ ಎಂದು ನಾಮಕರಣ ಮಾಡುತ್ತಾನೆ. ಬಸದಿಯಲ್ಲಿ ದೇವರ ದರ್ಶನ ಮಾಡಿ, ಗುರು-ಹಿರಿಯರಿಗೆ ವಂದಿಸಿ ಭರತ ಕ್ಷತ್ರಿಯ ಧರ್ಮವನ್ನು ರಾಜ ಧರ್ಮವನ್ನಾಗಿ ಮಾಡಿ, ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಚಕ್ರರತ್ನವನ್ನು ಮುಂದಿಟ್ಟುಕೊಂಡು ಅಹಿಂಸಾತ್ಮಕ ದಿಗ್ವಿಜಯಕ್ಕೆ ಹೊರಡುತ್ತಾನೆ.
ವೈಭವೋಪೇತ ಮೆರವಣಿಗೆಯೊಂದಿಗೆ ಪಂಚಮಹಾವೈಭವ ಮಂಟಪದಿಂದ ಹೊರಟ ದಿಗ್ವಿಜಯ ಶಾಂತಿವನ ತಲುಪುತ್ತದೆ. ಮಾರ್ಗ ಇಕ್ಕೆಲಗಳಲ್ಲಿಯೂ ಸಹಸ್ರಾರು ಮಂದಿ ದಿಗ್ವಿಜಯದ ವೈಭವವನ್ನು ಕಣ್ತುಂಬಿಕೊಂಡರು. ಸಂಜೆ ಅಯೋಧ್ಯೆಗೆ ವಿಜಯೀ ಭರತೇಶನ ಮರು ಪಯಣದ ವೈಭಪೋಪೇತ ಮೆರವಣಿಗೆ ನಡೆಯಿತು. ಭರತನ ರಾಜಗಾಂಭೀರ್ಯದ ನಡೆ-ನುಡಿ, ಚಕ್ರರತ್ನದ ಸೊಗಡು, ವೇಷ ಭೂಷಣಗಳು, ಕಲಾಮೇಳಗಳು, ಜಾನಪದ ಶೈಲಿಯ ವಾಲಗ, ಕೊಂಬು, ಕಹಳೆ, ನಗಾರಿ, ಡೊಳ್ಳುಕುಣಿತ, ಕೇರಳದ ಚೆಂಡೆವಾದನ, ಸೈನಿಕರು, ನಾಸಿಕ್ ಬ್ಯಾಂಡ್, ಸೈನಿಕರು ದಿಗ್ವಿಜಯ ಮೊರವಣಿಗೆಗೆ ವಿಶೇಷ ಮೆರುಗನ್ನು ನೀಡಿದವು. ಮೂವತ್ತಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದವು. ಸೈನಿಕರು (100 ಮಂದಿ), ಜಟ್ಟಿಗಳು (100 ಮಂದಿ) ಕಾಡು ಮನುಷ್ಯರು (102 ಮಂದಿ), ಕೇರಳದ ಚೆಂಡೆ ವಾದನದವರು (200 ಮಂದಿ) ನಾಸಿಕ್ ಬ್ಯಾಂಡ್ (30 ಮಂದಿ), ತಾಲೀಮು (10 ಮಂದಿ), ಕತ್ತಿ,  ಗುರಾಣಿ ಹಿಡಿದ ಸೈನಿಕರು (100 ಚಿಂದಿ) ದೇಚಿರ ಟ್ಯಾ ಬ್ಲೊ (10ಚಿಂದಿ) ಧ್ವಜ (50ಚಿಂದಿ) ಇತ್ಯಾದಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.