ಮಿತ್ತಬಾಗಿಲು ಗ್ರಾಮಸಭೆಯಲ್ಲಿ ಮತದಾರರ ಪ್ರತಿಜ್ಞಾವಿಧಿ

ಮಿತ್ತಬಾಗಿಲು : ಮಿತ್ತಬಾಗಿಲು ಗ್ರಾಮ ಪಂಚಾಯತದ ಗ್ರಾಮಸಭೆ ಪಂಚಾಯತದ ಅಧ್ಯಕ್ಷ ನಾರಾಯಣ ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಫೆ.11 ರಂದು ಮಿತ್ತಬಾಗಿಲು ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜರಗಿತು. ಉಪಾಧ್ಯಕ್ಷೆ ವನಿತಾ, ನೋಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಬಿ ಪಾಟೀಲ್, ಅಭಿವೃದ್ಧಿ ಅಧಿಕಾರಿ ದೇವರಾಜ್ ಗೌಡ ಹೆಚ್.ಡಿ, ಗ್ರಾ.ಪಂ ಸದಸ್ಯರು, ವಿವಿಧ ಇಲಾಖೆಗಳ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಸಭೆಗೆ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ದಿಢೀರನೇ ಭೇಟಿ ನೀಡಿ, ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಖಡ್ಡಾಯವಾಗಿ ಭಾಗವಹಿಸಬೇಕು. ನಿಮ್ಮ ಎಲ್ಲಾ ಸಮಸ್ಯೆಗಳ ಚರ್ಚಿಸಲು ಮುಕ್ತ ಅವಕಾಶವಿದೆ. ತಾಲೂಕು ಕಛೇರಿಯಲ್ಲಿ ನಿಮ್ಮ ಯಾವುದೇ ಕೆಲಸಕ್ಕೆ ಮಧ್ಯವರ್ತಿಗಳನ್ನ ಬಳಸಿಕೊಳ್ಳಬೇಡಿ. ಇಲಾಖಾಧಿಕಾರಿಗಳಿಗೆ ಯಾವುದೇ ಆಮಿಷ ಒಡ್ಡಬೇಡಿ. ಎನ್.ಸಿ.ಆರ್, 94ಸಿ, ಇವುಗಳು ನಿಜವಾದ ಫಲಾನುಭವಿಗಳಿಗೆ ದೊರೆಯಬೇಕು. ನಿಮ್ಮ ಸಮಸ್ಯೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ನನ್ನ ಬಳಿಗೆ ಬನ್ನಿ. ಜನಸ್ನೇಹಿ ತಾಲೂಕು ಹಾಗೂ ಭ್ರಷ್ಟಾಚಾರ ಮುಕ್ತ ತಾಲೂಕು ಮಾಡುವ ಉದ್ದೇಶ ನನ್ನದು. ಎಲ್ಲರೂ ಸಹಕಾರ ನೀಡಿ ಎಂದರು.

ಮತದಾನದ ಮಹತ್ವ ಮತ್ತು ಹಕ್ಕುಗಳ ಮುಕ್ತ ನ್ಯಾಯ ಸಮ್ಮತ ಮತದಾನದ ಬಗ್ಗೆ ತಹಶಿಲ್ದಾರರ ಸಮ್ಮುಖದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿಯನ್ನು ಗ್ರಾಮಸಭೆಯಲ್ಲಿ ಭೋಧಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.