HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

35 ವರ್ಷಗಳ ಬಳಿಕ ಉಜಿರೆ ಎಸ್‌ಡಿಎಂ ಕಬಡ್ಡಿ ತಂಡಕ್ಕೆ ಅಂತರ್ ಕಾಲೇಜು ಕಬಡ್ಡಿಯಲ್ಲಿ ರೋಲಿಂಗ್ ಟ್ರೋಫಿ

ಉಜಿರೆ: ಉಡುಪಿ ಜಿಲ್ಲೆ ತೆಂಕನೆಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ. 9 ರಂದು ನಡೆದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ 35 ವರ್ಷಗಳ ಬಳಿಕ ಶ್ರೀ ರತ್ನವರ್ಮ ಹೆಗ್ಗಡೆ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ಉಜಿರೆ ಎಸ್‌ಡಿಎಂ ಕಾಲೇಜು ಕಬಡ್ಡಿ ತಂಡ ತಮ್ಮದಾಗಿಸಿಕೊಂಡಿದೆ.
ಕ್ರೀಡಾತಂಡವನ್ನು ದೀಕ್ಷಿತ್ ಅವರು ಕಪ್ತಾನರಾಗಿ ಮುನ್ನಡೆಸುತ್ತಿದ್ದು, ಪ್ರೋ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದು ಕೀರ್ತಿ ತಂದಿರುವ ಮಿಥುನ್ ಗೌಡ, ಆಟಗಾರರಾದ ದೀಕ್ಷಿತ್ ಕೆ, ಅಭಿಲಾಶ್, ಪ್ರೀತಮ್ ಎಸ್, ಪ್ರೀತಮ್, ಸಚಿನ್ ಕೆ, ನವೀನ್ ಕುಮಾರ್ ಎಚ್.ಆರ್, ಅಜಯ್, ಶ್ರೀಶ ಕೆ.ಎಸ್, ಮನಿಲ್ ಯು, ಸನತ್, ಯೆಲ್ಲಪ್ಪ ಎಸ್.ಬಿ, ಪ್ರಜ್ವಲ್ ಎಮ್.ಯು, ಸಂತೋಷ್ ಇವರು ತಂಡಕ್ಕೆ ಆಯ್ಕೆಗೊಂಡವರಾಗಿದ್ದು ಉತ್ಕೃಷ್ಠ ಕ್ರೀಡಾ ಪ್ರದರ್ಶನ ನೀಡಿದ್ದಾರೆ.
ತಂಡಕ್ಕೆ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರೂ ಆಗಿರುವ ಕೃಷ್ಣಾನಂದ ರಾವ್ ಮುಂಡಾಜೆ ಇವರು ಮುಖ್ಯತರಬೇತುದಾರರಾಗಿದ್ದು, ಸಂದೇಶ್ ತಂಡದ ವ್ಯವಸ್ಥಾಪರಾಗಿ ಭಾಗಿಯಾಗಿದ್ದರು. ಎಸ್‌ಡಿಎಂ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಇವರು ನಿರ್ದೇಶನ ನೀಡುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.