ಫೆ. 17: ನಿಡ್ಲೆಯಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದಿಂದ ತಾ| ಮಟ್ಟದ ಕ್ರೀಡೋತ್ಸವ

ಬೆಳ್ತಂಗಡಿ: ಕ್ರೀಡಾಕೂಟದ ಮೂಲಕ ಗೌಡರ ಯಾನೆ ಒಕ್ಕಲಿಗ ಸಮಾಜ ಬಾಂಧವರನ್ನು ಕ್ರಿಯಾಶೀಲ ಮಾಡುವುದು ಮತ್ತು ಆ ಮೂಲಕ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿರುವ 42  ಗ್ರಾಮ ಸಮಿತಿಗಳನ್ನೂ ಆಹ್ವಾನಿಸಿ ಫೆ. 17  ರಂದು ನಿಡ್ಲೆ ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಸಮಾಜ ಬಾಂಧವರಿಗಾಗಿ ತಾಲೂಕು ಮಟ್ಟದ “ಗೌಡರ ಕ್ರೀಡೋತ್ಸವ-2019” ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಚಾಲಕ, ಯುವ ನ್ಯಾಯವಾದಿ ನವೀನ್ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ರೀಡಾಕೂಟಕ್ಕೆ ತಾ| ಗೌಡರ ಸಂಘ, ಗ್ರಾಮ ಸಮಿತಿ ನಿಡ್ಲೆ ಮತ್ತು ತಾ| ಯುವ ವೇದಿಕೆ ನೇತೃತ್ವ ನೀಡುತ್ತಿದೆ. ಪುರುಷರ ವಿಭಾಗದಲ್ಲಿ ಕಬಡ್ಡಿ ಮತ್ತು ಹಗ್ಗ ಜಗ್ಗಾಟ, ಮಹಿಳಾ ವಿಭಾಗದಲ್ಲಿ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ, ಸ್ಥಳೀಯ ಮಹಿಳೆಯರಿಗೆ ಸಂಗೀತ ಕುರ್ಚಿ ಮೊದಲಾದ ಪಂದ್ಯಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೆ 30  ಕ್ಕೂ ಅಧಿಕ ಗ್ರಾಮ ಸಮಿತಿ ತಂಡಗಳು ಹೆಸರು ನೊಂದಾಯಿಸಿಕೊಂಡಿದೆ. 9  ಗಂಟೆಗೆ ಸಾಂಕೇತಿಕ ಸಭೆ ನಡೆಸಿ ಗಣ್ಯ ಅತಿಥಿಗಳ ಸಮ್ಮುಖ ಕ್ರೀಡಾಕೂಟ ಪ್ರಾರಂಭಗೊಳ್ಳಲಿದೆ. ವಿಜೇತ ತಂಡಗಳಿಗೆ ನಗದು ಮತ್ತು ಫಲಕಗಳನ್ನು ನೀಡಲಾಗುವುದು. ಈ ಕ್ರೀಡಾಕೂಟದಲ್ಲಿ ತಾಲೂಕಿನ ಮೂಲೆಮೂಲೆಗಳಿಂದ 3 ಸಾವಿರದಷ್ಟು ಮಂದಿ ಸೇರುವ ನಿರೀಕ್ಷೆ ಇದ್ದು, ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ| ಅಧ್ಯಕ್ಷ ಜಿ ಸೋಮೇ ಗೌಡ,ಜಯಾನಂದ ಗೌಡ, ಗಿರೀಶ್ ಗೌಡ, ರಾಜೇಂದ್ರ ಗೌಡ, ಮಂಜು ನೂಜಿಲ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.