ಪುಂಜಾಲಕಟ್ಟೆ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌: ಸಾಮೂಹಿಕ ವಿವಾಹ, ಸಾಧಕರಿಗೆ ಪ್ರಶಸ್ತಿ ಪ್ರದಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲ್, ದಯಾನಂದ ಜಿ ಕತ್ತಲ್‌ಸಾರ್, ಡಾ| ಲೋಕೇಶ್ ವಿಟ್ಲ, ರವಿ ಕಕ್ಕೆಪದವು ಉಪಸ್ಥಿತರಿದ್ದರು.

ಬೆಳಿಗ್ಗೆ ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮುಂಬಯಿ ಉದ್ಯಮಿ, ಚೆನ್ನೈತ್ತೋಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕಾಪು ಜಯರಾಮ ಶೆಟ್ಟಿ ಅವರು ದಿಬ್ಬಣವನ್ನು ಉದ್ಘಾಟಿಸಿದರು. ಪ್ರಮುಖರಾದ ರವೀಂದ್ರ ಬಾಳಿಗ, ಲಕ್ಷ್ಮೀನಾರಾಯಣ ಉಡುಪ, ಲೋಕೇಶ್‌ ಆಚಾರ್ಯ, ಪ್ರಕಾಶ್‌ ಅಂಚನ್‌, ಹೇಮಂತ್‌ ಕುಮಾರ್‌, ಉದಯ ಕುಮಾರ್‌ ಕಟ್ಟೆಮನೆ, ವಿಜಯ ರೈ ಮತ್ತಿತರ ಗಣ್ಯರು ಉಪಸ್ಥಿತರಿದ್ದರು 

ಪುಂಜಾಲಕಟ್ಟೆ: ಕಳೆದ 34 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ 35ನೇ ಸಂಭ್ರಮಾಚರಣೆ ಪ್ರಯುಕ್ತ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ  ಫೆ.10 ರಂದು  ಪುಂಜಾಲಕಟ್ಟೆ  ಬಂಗ್ಲೆ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲ್, ದಯಾನಂದ ಜಿ ಕತ್ತಲ್‌ಸಾರ್, ಡಾ| ಲೋಕೇಶ್ ವಿಟ್ಲ, ರವಿ ಕಕ್ಕೆಪದವು ಉಪಸ್ಥಿತರಿದ್ದರು.

ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ಬಿ.ಸಿ.ರೋಡ್ ಸೊಮಯಾಜಿ ಇಂಡಸ್ಟ್ರೀಸ್‌ನ ಲೋಕೇಶ್, ಮನೋಜ್ ಆಚಾರ್ಯ ನಾಣ್ಯ, ಬಂಟ್ವಾಳ ತಹಶಿಲ್ದಾರ್ ಪುರಂದರ ಹೆಗ್ಡೆ, ಹೈಕೋರ್ಟ್ ನ್ಯಾಯವಾದಿ ವಸಂತ ಹೆಗ್ಡೆ ಮತ್ತು ಶ್ರೀಮತಿ ಸ್ವರ್ಣಲತಾ ದಂಪತಿ, ಉದಯಕುಮಾರ್ ಕಟ್ಟೆಮನೆ, ಪಿಲಾತಬೆಟ್ಟು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಇರ್ವತ್ತೂರು ಗ್ರಾ.ಪಂ ಅಧ್ಯಕ್ಷೆ ಸುಜಾತ, ಪಿಲಾತಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ಸುಂದರ್ ನಾಕ್ ಗೌರವ ಉಪಸ್ಥಿತರಿದ್ದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಹಾಪೋಷಕರಾದ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಸುಂದರರಾಜ್ ಹೆಗ್ಡೆ ಮುಂಬಯಿ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸ್ಥಾಪಕಾಧ್ಯಕ್ಷ ಹಾಗೂ ಸಂಗಬೆಟ್ಟು ಕ್ಷೇತ್ರದ ಜಿ.ಪಂ ಸದಸ್ಯ ಯಂ.ತುಂಗಪ್ಪ ಬಂಗೇರ, ಗೌರವಾಧಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಹಾಗೂ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮದುವೆ ಮಂಟಪದವರೆಗೆ ವಧು- ವರರ ದಿಬ್ಬಣವು ವಿವಿಧ ಸ್ತಬ್ಧಚಿತ್ರ, ಕಲಾ ತಂಡಗಳು, ಶಿಲ್ಪಾ ಗೊಂಬೆ ಬಳಗ, ಬ್ಯಾಂಡ್‌ , ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ಬಂಗ್ಲೆ ಮೈದಾನಕ್ಕೆ ಸಾಗಿ ಬಂತು. ಸಭಾಂಗಣ ದಲ್ಲಿ ವಧು-ವರರನ್ನು ಸಾಂಪ್ರಾದಾಯಿಕವಾಗಿ ಎದುರುಗೊಳ್ಳಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.