ಧರ್ಮಸ್ಥಳ ಶ್ರೀ ಬಾಹುಬಲಿ ಬೆಟ್ಟದಲ್ಲಿ ಲೇಸರ್ ಶೋ ಉದ್ಘಾಟನೆ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಧರ್ಮಸ್ಥಳ: ಸರಕಾರ ಮಾಡಲಾಗದ ಕೆಲಸಗಳನ್ನೂ ಪೂಜ್ಯ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಆಶೀರ್ವಾದದ ಫಲದಿಂದ ಇಂದು ರಾಜ್ಯಾಧ್ಯಂತ ಲಕ್ಷಾಂತರ ಕುಟುಂಬ ದುಶ್ಚಟಮುಕ್ತವಾಗಿ ಬದುಕು ಸಾಗಿಸುತ್ತಿದೆ. ಗ್ರಾ. ಯೋಜನೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಎಲ್ಲಾ ಪ್ರಾಕಾರಗಳಲ್ಲೂ ಶ್ರೀ ಕ್ಷೇತ್ರದ ಆಶ್ರಯ ನಾಡಿನ ಜನತೆಗೆ ದೊರೆಯುತ್ತಿದ್ದು ಪೂಜ್ಯ ಹೆಗ್ಗಡೆಯವರು ಅತ್ಯುನ್ನತವಾದ ಭಾರತ ರತ್ನದಂತಹಾ ಎಲ್ಲಾ ಪ್ರಶಸ್ತಿ ಪುರಸ್ಕಾರಕ್ಕಿಂತಲೂ ಮೀರಿ ಬೆಳೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಸಚಿವೆ ಜಯಮಾಲಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಫೆ. 9 ರಂದು ಬಾಹುಬಲಿ ಬೆಟ್ಟದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಲೇಸರ್ ಶೋ ಉದ್ಘಾಟಿಸಿ ಮಾತನಾಡಿದ ಕನ್ನಡದ ಖ್ಯಾತ ನಟ, ರಮೇಶ ಅರವಿಂದ, ದರ್ಮ, ಧರ್ಮಕ್ಷೇತ್ರ, ದೇವಸ್ಥಾನಗಳು ಅಪರಿಚಿತರನ್ನೂ ಪರಸ್ಪರ ಒಂದುಗೂಡಿಸುವ ಶಕ್ತಿ ಹೊಂದಿದೆ. ಶ್ರೀ ಕ್ಷೇತ್ರದಲ್ಲಿ ಅಂತಹಾ ಸಂಗಮ ಇವತ್ತು ಆಗಿದ್ದು, ಅದರ ಹಿಂದೆ ಪೂಜ್ಯ ಹೆಗ್ಗಡೆಯವರ ಜವಾಬ್ಧಾರಿ ಮತ್ತು ಪಾವಿತ್ರ್ಯವಾದ ಶಕ್ತಿ ಎದ್ದುಕಾಣುತ್ತದೆ. ಧರ್ಮಸ್ಥಳಕ್ಕೆ ಬರುತ್ತಿರುವಂತೆ ಇಲ್ಲಿನ ಅಲಂಕಾರ ಮತ್ತು ಎಲ್ಲ ವ್ಯವಸ್ಥೆಗಳನ್ನು ನೋಡಿ ರಾಜವೈಭೋಗದ ಅನುಭಾವ ಬಂದಿತ್ತು. ಬಾಹುಬಲಿ ಸತ್ಯ, ತ್ಯಾಗ, ಅಹಿಂಸೆ ಸಾರಿದವರು. ನಮ್ಮ ಯೋಚನಾ ಶಕ್ತಿ, ಪ್ರೀತಿಸುವ ಪರಿ, ಮಾನಸಿಕವಾಗಿ ಬಾಹುಬಲಿಯ ವಿಟಾಟ್ ಮೂರ್ತಿಯ ಎತ್ತರಕ್ಕೆ ಏರಬೇಕು ಎಂದರು.
ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ ಹೆಗ್ಗಡೆಯವರು, ಶಾಸಕ ಹರೀಶ ಪೂಂಜ, ಡಿ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್ ಸಹಿತ ಹೆಗ್ಗಡೆಯವರ ಕುಟುಂಬಸ್ತರು ಉಪಸ್ಥಿತರಿದ್ದರು.
ಸಚಿವೆ ಜಯಮಾಲಾ ಅವರು ನಟರಾಜನ ಮೂರ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವಾ ಅವರಿಗೆ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಪ್ರೊ. ಎಂ ರಾಮಚಂದ್ರ ಸ್ವಾಗತಿಸಿದರು. ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್ ಮತ್ತು ಮೊಮ್ಮಗಳು ಮಾನ್ಯಾ ಸಚಿವರನ್ನು ಗೌರವಿಸಿದರು. ಸ್ವಾಗತ ಭಾಷಣ ಮಾಡಿದ ಪ್ರೊ. ಎಂ ರಾಮಚಂದ್ರ ಅವರನ್ನು ಡಾ. ಹೆಗ್ಗಡೆಯವರು ಸನ್ಮಾನಿಸಿದರು.
ಲೇಸರ್ ಶೋ ಪ್ರದರ್ಶನ:
ಭಗೀರಥ ಮತ್ತು ಬಳಗದವರು ನಿರ್ಮಿಸಿದ ಲೇಸರ್ ಶೋದಲ್ಲಿ ಭರತ ಬಾಹುಬಲಿ ಜೀವನ ಕಥೆಯನ್ನು 17 ನಿಮಿಷಗಳಲ್ಲಿ ಹೆಣೆದಿದ್ದು ಅದರ ಮೊದಲ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಭಗವಾನ್ ಬಾಹುಬಲಿ ಮೂರ್ತಿಯ ಮೇಲೆಯೇ ನಡೆದ ಬೆಳಕಿನ ಚಿತ್ತಾರದ ಈ ಶೋ ಅತ್ಯದ್ಭುತವಾಗಿ ಮೂಡಿಬಂದಿದ್ದು, ಪ್ರತಿ ದಿನ ಸಂಜೆ 3 ಶೋಗಳು ನಡೆಯಲಿದೆ ಎಂದು ಪ್ರಕಟಿಸಲಾಯಿತು. ಲೇಸರ್ ಶೋ ಸಂಯೋಜಿಸಿದವರಿಗೆ ಕ್ಷೇತ್ರದ ಗೌರವ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.