HomePage_Banner_
HomePage_Banner_

ಸೌತಡ್ಕ ಮೂಡಪ್ಪ ಸೇವೆ ಸಂಪನ್ನ

ಕೊಕ್ಕಡ: ಬಯಲು ಆಲಯದ ಸೌತಡ್ಕ ಶ್ರಿ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಮಾಘಶುದ್ಧ ಚೌತಿಯ ಪ್ರಯುಕ್ತ ಫೆ.8 ರಂದು  ಶ್ರೀ ದೇವರಿಗೆ ಮೂಡಪ್ಪ ಸೇವೆ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಮೂಡಪ್ಪ ಸೇವೆ, ರಂಗಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರುಗಳಾದ ವಿಶ್ವನಾಥ ಕೊಲ್ಲಾಜೆ, ಸತ್ಯಪ್ರಿಯ ಕಲ್ಲೂರಾಯ, ವಿಶ್ವನಾಥ ಶೆಟ್ಟಿ, ಪ್ರಶಾಂತ ರೈ, ಗಣೇಶ್ .ಪಿ.ಕೆ, ಅಣ್ಣಪ್ಪ ಗೌಡ ಕಾಶಿ, ಸಿನಿ ಗುರುದೇವನ್, ಸೌಮ್ಯ, ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಮತ್ತು ಊರಪರವೂರ ಭಕ್ತಜನರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ ಸೌತಡ್ಕ ಶಿಶು ಮಂದಿರದ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ರಾತ್ರಿ  ಮಂಗಳಾದೇವಿ ಮೇಳದವರಿಂದ ಪರಕೆದ ಪಿಂಗಾರ ಯಕ್ಷಗಾನ ಕಾರ್ಯಕ್ರಮಗಳು ನಡೆದವು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.