ಜಯ ಕರ್ನಾಟಕ ವೇಣೂರು ಘಟಕದ ಉದ್ಘಾಟನೆ

Advt_NewsUnder_1
Advt_NewsUnder_1

ವೇಣೂರು: ಗ್ರಾಮೀಣ ಭಾಗದ ಜನತೆಯ ಸೇವೆ ಮಾಡುವ ಅವಕಾಶ ಜಯ ಕರ್ನಾಟಕ ಸಂಘಟನೆ ಲಭಿಸಿದೆ. ಒಂದೇ ನಾಡು ಒಂದೇ ಕುಲ ಒಂದೇ ದೈವ ಎಂಬ ಧ್ಯೇಯದೊಂದಿಗೆ ಎನ್. ಮುತ್ತಪ್ಪ ರೈಯವರ ನೇತೃತ್ವದಲ್ಲಿ ಅಸ್ವಿತ್ವಕ್ಕೆ ಬಂದಿರುವ ಈ ಸಂಘಟನೆ ನೊಂದವರಿಗೆ ಶಕ್ತಿ ನೀಡಲಿದೆ ಎಂದು ಜಯ ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ರಾಮಚಂದ್ರಯ್ಯ ಹೇಳಿದರು.
ನಿಟ್ಟಡೆ ಗ್ರಾಮದ ಬರ್ಕಜೆಯಲ್ಲಿ ನಡೆದ ಜಯ ಕರ್ನಾಟಕ ವೇಣೂರು ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಯ ಕರ್ನಾಟಕ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಯ ಕರ್ನಾಟಕ ವೇಣೂರು ಘಟಕದ ಅಧ್ಯಕ್ಷ ಡಾ| ಸುಧಾಕರ, ರಾಜ್ಯ ಸಂಘಟನ ಕಾರ್ಯದರ್ಶಿ ಎಂ. ಸುರೇಂದ್ರನಾಥ ಆಳ್ವ, ರಾಜ್ಯ ಸಂಚಾಲಕ ಕೃಷ್ಣಪ್ಪ, ಉಪಾಧ್ಯಕ್ಷ ಆರ್. ಮನುಸ್ವಾಮಿ, ಜಯಕರ್ನಾಟಕ ಪುತ್ತೂರು ತಾ| ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕೆರೆ, ಬಂಟ್ವಾಳ ತಾ| ಅಧ್ಯಕ್ಷ ಪ್ರಮೋದ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬರ್ಕಜೆ ಕ್ಷೇತ್ರದ ಧರ್ಮದರ್ಶಿ ರಮೇಶ್ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವೇಣೂರು ಜಯಕರ್ನಾಟಕ ಸದಸ್ಯರನ್ನು ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಅವರು ಹೂ ನೀಡಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.