ಗರ್ಡಾಡಿ: ರೂ. 75 ಲಕ್ಷದ ಕಾಂಕ್ರಿಟ್ ರಸ್ತೆಗೆ ಶಿಲಾನ್ಯಾಸ

ಜನರ ಬೇಡಿಕೆಗಳಿಗೆ ನಿರಂತರ ಸ್ಪಂದನೆ: ಐವನ್ ಡಿಸೋಜ

ಗರ್ಡಾಡಿ: ಅಭಿವೃದ್ಧಿ ಮತ್ತು ರಾಜಕಾರಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಜಕಾರಣಿಗಳು ಜನರ ಬೇಡಿಕೆಗೆ ಸ್ಪಂಧಿಸುವವರಂತಾಗ ಬೇಕು. ಯಾವುದೇ ಅನುದಾನಗಳು ಸುಲಭವಾಗಿ ಲಭಿಸುವುದಿಲ್ಲ. ನಾಗರಿಕರ ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನದ ಬಳಿಕ ಅನುದಾನ ಮಂಜೂರುಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.
ಪಡಂಗಡಿ ಗ್ರಾ.ಪಂ. ವ್ಯಾಪ್ತಿಯ ಪೊಯ್ಯಗುಡ್ಡೆಯ ಮೇಕಜೆ-ಪೊರ್ನಡ್ಕ-ಪುತ್ಯೆ ಸಂಪರ್ಕ ರಸ್ತೆಗೆ ವಿಧಾನ ಪರಿಷತ್ ಸದಸ್ಯರ (ಎಸ್‌ಸಿಪಿ, ಟಿಎಸ್‌ಪಿ) ರೂ. 50 ಲಕ್ಷ ನಿಧಿ ಹಾಗೂ ಹರೀಶ್ ಕುಮಾರ್ ಅವರ ರೂ. 20
ಕಳೆದ ಬಾರಿಯ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಒಂದೇ ವರ್ಷದಲ್ಲಿ ರೂ. 70 ರಿಂದ ರೂ. 75 ಕೋಟಿ ಅನುದಾನವನ್ನು ದ.ಕ. ಜಿಲ್ಲೆಯ ನೂತನ ಚರ್ಚ್ ಹಾಗೂ ನವೀಕರಣಕ್ಕೆ ಒದಗಿಸಿದ್ದಾರೆ. ದೇವಸ್ಥಾನ, ಮಸೀದಿಗಳಿಗೂ ಭಾರೀ ಅನುದಾನ ಒದಗಿಸಿದ್ದರು. ತಾ| ಎರಡು ರಸ್ತೆಗೆ ಈಗಾಗಲೇ ರೂ. 1 ಕೋಟಿ ಅನುದಾನ ಒದಗಿಸಿದ್ದೇನೆ ಎಂದರು.
ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯ ಸುಶೀಲ, ಗರ್ಡಾಡಿ ಚರ್ಚ್ ಧರ್ಮಗುರು ಮೆಲ್ವಿನ್ ಡಿಸೋಜ, ಬದ್ಯಾರು ಚರ್ಚ್‌ನ ಧರ್ಮಗುರು ಮಾರ್ಕ್ಸ್ ಸಲ್ಡಾನ, ಪಡಂಗಡಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಡಂಗಡಿ ಗ್ರಾ.ಪಂ. ಸದಸ್ಯ ಹಾಮದ್ ಬಾವಾ, ಸ್ವಾಗತಿಸಿ ನಿರ್ವಹಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.