ಅಶಕ್ತರಿಗೆ ನೆರವಾಗಲು ಅಳದಂಗಡಿಯಲ್ಲೊಂದು ಮಾದರಿ ಕ್ರಿಕೆಟ್ ಪಂದ್ಯಾಟ

ಅಳದಂಗಡಿ: ಅಶಕ್ತರಿಗೆ ಸಾಂತ್ವನ ನಿಧಿ, ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ನೀಡುವ ಮಹತ್ತರ ಉದ್ಧೇಶದಿಂದ “ಸೇವೆ-ಸಂಘಟನೆ-ಸಾಮರಸ್ಯ” ಎಂಬ ಮಹತ್ವದ ಪರಿಕಲ್ಪನೆಯೊಂದಿಗೆ ಸತ್ಯದೇವತಾ ಸ್ಪೋರ್ಟ್ಸ್ ಕ್ಲಬ್‌ಅಳದಂಗಡಿ ಮತ್ತು ಫ್ರೆಂಡ್ಸ್ ಕ್ಲಬ್ ಅಳದಂಗಡಿ ಜಂಟಿ ಆಶ್ರಯದಲ್ಲಿ ಫೆ. 2 ಮತ್ತು 3 ರಂದು ಅಳದಂಗಡಿ ದೇವಳದ ಮುಂಭಾಗದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿತ್ತು. ಅತ್ಯಂತ ಮಾದರಿಯಾದ ಈ ಕಾರ್ಯಕ್ರಮದಲ್ಲಿ ಸಾಂತ್ವನ ಸೇವಾ ನಿಧಿಯ ಫಲಾನುಭವಿಗಳಾದ ಶಂಭು ಮುಡಾಯಿಹಿತ್ತಿಲು, ಇಮ್ರಾನ್ ಜನತಾ ಕಾಲನಿ, ಕಮಲಾ ನಾವರ, ಅನಿಲ್ ಕುಮಾರ್ ಉಂಗಿಲಬೈಲು, ಲಿಡ್ವಿನ್ ಡಿಸೋಜಾ ದರ್ಖಾಸು, ತಿಮ್ಮಯ್ಯ ಪೂಜಾರಿ ಮುಡಾಯಿಹಿತ್ತಿಲು ಮತ್ತು ರುಕ್ಮಯ್ಯ ಮೂಲ್ಯ ಸೂಳಬೆಟ್ಟು ಇವರಿಗೆ ಆರ್ಥಿಕ ನೆರವು ನೀಡಲಾಯಿತು. ಅಳದಂಗಡಿ ಸುತ್ತಮುತ್ತಲ ಸರಕಾರಿ ಶಾಲೆಗಳ ೬ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಪಂದ್ಯಾಟವನ್ನು ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಉದ್ಘಾಟಿಸಿದರು. ಸಮಾರಂಭಧ ಅಧ್ಯಕ್ಷತೆಯನ್ನು ಮಹಾಗಣಪತಿ ದೇವಸ್ಥಾನದ ಪ್ರ. ಅರ್ಚಕ ಸೋಮನಾಥ ಮಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಜಿ ಕುರಿಯನ್ ಕೋಶಮಟ್ಟಂ ಫೈನಾನ್ಸ್, ಎಂ.ಕೆ ಪ್ರಸಾದ್, ಸರೋಜಿನಿ, ಪಿಲ್ಯ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಕೆ ದಾವೂದ್ ಲತೀಫಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಿವಪ್ರಸಾದ್ ಅಜಿಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಂಗಾಧರ ಮಿತ್ತಮಾರು, ಡಾ. ಎನ್.ಎಂ ತುಳಪುಳೆ, ಪತ್ರಕರ್ತ ಅಶ್ರಫ್ ಆಲಿಕುಂಞಿ, ಡಾ. ಹರಿಪ್ರಸಾದ್ ಸುವರ್ಣ, ತಾ.ಪಂ ಸದಸ್ಯೆ ವಿನುಷಾ ಪ್ರಕಾಶ್, ಸಂಜೀವ ಪೂಜಾರಿ ಕೊಡಂಗೆ, ಶ್ರೀನಿವಾಸ ರಾವ್ ದೋರಿಂಜ, ಸದಾನಂದ ಪೂಜಾರಿ ಉಂಗಿಲಬೈಲು, ನಾಗಕುಮಾರ್ ಜೈನ್, ಪ್ರಕಾಶ್ ಹೊಳ್ಳ, ನಿತ್ಯಾನಂದ ನಾವರ, ಪ್ರಶಾಂತ್ ವೇಗಸ್, ಸದಾನಂದ ಎಂ.ಕೆ, ಸಂತೋಷ್ ಪಿ ಕೋಟ್ಯಾನ್, ಚಿದಾನಂದ ಎಲ್ಡಡ್ಕ, ರಮೇಶ್ ಸುವರ್ಣ, ಸೇಸಪ್ಪ ನಲಿಕೆ, ಪ್ರಭಾಕರ ನಲಿಕೆ, ಶಶಿಧರ ಶೆಟ್ಟಿ, ಧರ್ಣಪ್ಪ ಪೂಜಾರಿ ಬಳಂಜ, ಜಗಧೀಶ್ ಹೆಗ್ಡೆ, ಸತೀಶ್ ಎಸ್.ಎಂ, ರಾಕೇಶ್ ಕುಮಾರ್ ಮೂಡುಕೋಡಿ, ಪ್ರೇಮಾ, ಸತೀಶ್ ಪೂಜಾರಿ, ಮುಭ್ಯಾಝ್ , ಜನಾರ್ದನ ಪೂಜಾರಿ, ಸುಧೀರ್ ಪಟ್ಲ, ಯೋಗೀಶ್ ರಾವ್ ದೋರಿಂಜ, ಪ್ರಶಾಂತ್, ಮೋಹನ ಎ ದಾಸ್, ಲಲಿತಾ, ಅಖ್ತರ್ ಹಾಜಿ ಮೂಡಬಿದ್ರೆ, ಶಾಂತಿರಾಜ್ ಜೈನ್, ಮೊದಲಾದವರು ಭಾಗಿಯಾಗಿದ್ದರು.
ಸ್ಕೂಲ್ ಕಿಟ್‌ಗೆ ಸದಾಶಿವ ಶೆಟ್ಟಿ ಗಣೇಶ್ ಸ್ಟೋರ್‍ಸ್, ದಿಲೀಪ್ ಚಕ್ರವರ್ತಿ ಪ್ರತೀಕ್ ಟೆಕ್ಸ್‌ಟೈಲ್ಸ್ ಇವರು ಪ್ರಾಯೋಜಕತ್ವ ನೀಡಿದರು.
ಕಾರ್ಯಕ್ರಮ ಪ್ರಧಾನ ಸಂಘಟಕ ಸಂದೀಪ್ ಎನ್ ನೀರಲ್ಕೆ ಅರುವ ಕಾರ್ಯಕ್ರಮ ಸಂಯೋಜಿಸಿದ್ದರು. ಕಿರಣ್ ಅರುವ, ಚಂದ್ರಶೇಖರ, ಅಭಿಷೇಕ್, ಪ್ರವೀಣ್ ಮಯ್ಯ, ಪ್ರಶಾಂತ್ ಭಂಡಾರಿ, ವಿಶ್ವನಾಥ ಕಾಶಿಪಟ್ಣ, ಉಮೇಶ್ ಸುವರ್ಣ ಹಾಗೂ ಸಮಿತಿ ಎಲ್ಲಾ ಸದಸ್ಯರುಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.