HomePage_Banner_
HomePage_Banner_

ಕಾರ್ಕಳ ನೆಲ್ಲಿಕಾರಿನಲ್ಲಿ ಅಪಘಾತ: ಅಳದಂಗಡಿ ಸೂರ್ಲೋಡಿಯ ಕೇಶವ ಬಂಗೇರ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಕಾರ್ಕಳದ ನೆಲ್ಲಿಕಾರು ಸಮೀಪ ಜ. 30 ರಂದು ಬೈಕಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾದ ಘಟನೆಯಲ್ಲಿ ಅಳದಂಗಡಿ ಸನಿಹದ ಸೂರ್ಲೋಡಿ ನಿವಾಸಿ, ಕ್ರಿಯಾಶೀಲ ಸಂಘಟಕ ಹಾಗೂ ಖ್ಯಾತ ಕಂಬಳದ ಓಟಗಾರರಾಗಿದ್ದ ಕೇಶವ ಬಂಗೇರ (51 ವ.) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ಮಿಯಾರಿನಲ್ಲಿರುವ ಪತ್ನಿಯ ಮನೆಗೆಂದು ಅವರು ಸಂಜೆ 4.30 ರ ವೇಳೆಗೆ ಹೊರಟು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದ್ದರು. ಅವರ ಬೈಕ್ ನೆಲ್ಲಿಕಾರು ತಲುಪುತ್ತಿದ್ದಂತೆ ಯಾವುದೋ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಅವರು ಗಂಭೀರ ಗಾಯಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದ ವೇಳೆ ಅವರು ಹೆಲ್ಮೆಟ್ ಧರಿಸಿದ್ದರೂ ಅದು ಬೇರ್ಪಟ್ಟು ಹೋಗಿತ್ತು. ಅವರ ಬೈಕಿಗೆ ಡಿಕ್ಕಿ ಹೊಡೆದ ವಾಹನ ನಿಲ್ಲಿಸದೆ ಪರಾರಿಯಾಗಿದೆ. ಹೊಸ್ಮಾರು ಮತ್ತು ನೆಲ್ಲಿಕಾರು ಪರಿಸರದ ಸಿಸಿ ಕ್ಯಾಮರಾ ಪರಿಶೀಲಿಸಲಾಗಿದ್ದು, ಈ ಸಮಯಕ್ಕೆ ಹೊಂದಾಣಿಕೆಯಾಗುವಂತೆ ಕಾರೊಂದು ಹಾದುಹೋಗುವುದು ಕಾಣಿಸಿದೆ. ಆ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ.
ಬೈಕಿನ ಜೊತೆಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ರಸ್ತೆ ಮೇಲೆ ಬಿದ್ದಿದ್ದ ಕೇಶವ ಬಂಗೇರ ಅವರ ಲೈಸೆನ್ಸ್ ಮತ್ತು ಇತರ ಗುರುತಿನ ಚೀಟಿಯ ಆಧಾರದಲ್ಲಿ ಗುರುತು ಪತ್ತೆ ಬಳಿಕ ಅವರ ಮನೆಯವರಿಗೆ ಮಾಹಿತಿ ಲಭಿಸಿತ್ತು.
ಸೂರ್ಲೋಡಿ ನಿವಾಸಿ ದಿ. ಅಣ್ಣು ಪೂಜಾರಿ ಮತ್ತು ಸೋಮಾವತಿ ದಂಪತಿ ಪುತ್ರರಾಗಿರುವ ಕೇಶವ ಬಂಗೇರ ಅವರು ಉತ್ತಮ ಕೃಷಿಕರಾಗಿದ್ದರು. ಶಿರ್ಲಾಲು- ಕರಂಬಾರು ಮತ್ತು ಮದ್ದಡ್ಕದಲ್ಲಿ ಕಲ್ಲಿನಕೋರೆ ಉದ್ಯಮ, ಅದರ ಜೊತೆಗೆ ಸುರಕ್ಷಾ ಎನ್ನುವ ಟ್ರಾವೆಲ್ಸ್ ಕೂಡ ಹೊಂದಿದ್ದರು.
ಮೃತರು ತಾಯಿ ಸೋಮಾವತಿ, ಪತ್ನಿ ಲಲಿತಾ, ಮಕ್ಕಳಾದ ಮುರಳಿ, ಮುಖೇಶ ಮತ್ತು ಮನು, ಸಹೋದರ, ಬೆಳ್ತಂಗಡಿ ತಾ| ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಚಂದ್ರಶೇಖರ, ಸಹೋದರಿಯರಾದ ರಂಜಿನಿ ದೇವೇಂದ್ರ, ಸುಜಾತಾ ಶೀನಪೂಜಾರಿ ಕುತ್ಲೂರು, ಚಂದ್ರಾವತಿ ಸುರೇಶ್ ಮಡಂತ್ಯಾರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.