ಮಾಸ್ಟರ್ ಆಫ್ ಡೆಂಟಲ್ ಸರ್ಜರಿ: ಡಾ| ಅಪೂರ್ವ ಕಾರ್ತಿಕ್ 5ನೇ ರ್‍ಯಾಂಕ್

ಬೆಳ್ತಂಗಡಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇವರು ನಡೆಸಿದ ಎಂ.ಡಿ.ಎಸ್(ಮಾಸ್ಟರ್ ಆಫ್ ಡೆಂಟಲ್ ಸರ್ಜರಿ) ಪೆರಿಯೋಡೊಂಟಿಕ್ಸ್ ಮತ್ತು ಒರಲ್ ಇಂಪ್ಲಾಟಾಲಜಿ ವಿಭಾಗದ ಪರೀಕ್ಷೆಯಲ್ಲಿ ಡಾ| ಅಪೂರ್ವ ಕಾರ್ತಿಕ್‌ರವರು 5ನೇ ರ್‍ಯಾಂಕ್ ಪಡೆದ ಸಾಧನೆಗೆ ಪಾತ್ರರಾಗಿದ್ದಾರೆ.
ಇವರು ಧಾರವಾಡದ ಪ್ರತಿಷ್ಠಿತ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮತ್ತು ಹಾಸ್ಪಿಟಲ್‌ನ ವಿದ್ಯಾರ್ಥಿನಿಯಾಗಿದ್ದು, ಬೆಳ್ತಂಗಡಿಯ ಅಶ್ವಿನಿ ಮೆಡಿಕಲ್ಸ್‌ನ ಮಾಲಕರಾದ ಎಂ. ಚಂದ್ರಶೇಖರ್ ಮತ್ತು ಶ್ರೀಮತಿ ಗೀತಾ ಎಸ್.ಎಂ ದಂಪತಿಯ ಪುತ್ರಿ.
ಉಜಿರೆಯ ಅನುಗ್ರಹದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿದ್ದ ಇವರು ಉಜಿರೆ ಎಸ್.ಡಿ.ಎಂನಲ್ಲಿ ಪಿಯು ಶಿಕ್ಷಣವನ್ನು ಪಡೆದು, ಎ.ಜೆ ಡೆಂಟಲ್ ಕಾಲೇಜಿನಲ್ಲಿ ಬಿ.ಡಿ.ಎಸ್ ಪದವಿಯನ್ನು ಉನ್ನತಶ್ರೇಣಿ ಹಾಗೂ 10ನೇ ರ್‍ಯಾಂಕ್‌ನೊಂದಿಗೆ ಪಡೆದುಕೊಂಡಿದ್ದರು. 2017ರಲ್ಲಿ ಮಾನಲೀಯಲ್ಲಿ ನಡೆದ 16ನೇ ನ್ಯಾಷನಲ್ ಪಿ.ಜಿ ಕನ್‌ವೆನ್‌ಷನ್‌ಲ್ಲಿ ರಾಷ್ಟ್ರೀಯ ಮಟ್ಟದ ಬೆಸ್ಟ್ ಪೇಪರ್ ಪ್ರ್ರೆಸೆಂಟೇಷನ್ ಪ್ರೈಜ್ ಹಾಗೂ ಡಾ| ಕೆ.ಆರ್ ಲಕನ್‌ಪಾಲ್ ಅವಾರ್ಡ್ನಿಂದ ಪುರಸ್ಕೃತಗೊಂಡಿದ್ದಾರೆ. ಪ್ರಸ್ತುತ ಇವರು ಮಂಗಳೂರಿನ ಎ.ಜೆ ಡೆಂಟಲ್ ಕಾಲೇಜ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.