ಫೆ. 11: ಉಜಿರೆಯಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ನಿಯಮಿತ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

        ಆರ್ಥಿಕ ಕ್ಷೇತ್ರದ ಆರಂಭದ ಜೊತೆ ಸಮುದಾಯ ಸಂಘಟನೆ ಮೊದಲ ಹೆಜ್ಜೆ

ಬೆಳ್ತಂಗಡಿ: ತಾಲೂಕಿನಲ್ಲಿ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಮಾಜವನ್ನು ಸಧೃಡ ಸಂಘಟನೆಯಾಗಿ ಕಟ್ಟುವುದರ ಜೊತೆಗೆ ಆರ್ಥಿಕ ಸಬಲೀಕರಣದ ಉದ್ಧೇಶವಿಟ್ಟು ಸಮಾಜದ ಇತರರಿಗೂ ಸೇವೆಯನ್ನು ಒದಗಿಸುವ ಸದುದ್ದೇಶದೊಂದಿಗೆ ಸ್ಥಾಪಿತವಾಗಿರುವ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಕೇಂದ್ರ ಕಚೇರಿ ಉದ್ಘಾಟನೆ ಫೆ. 11  ರಂದು ಉಜಿರೆಯಲ್ಲಿ ನಡೆಯಲಿದೆ ಎಂದು ಸಂಘದ ನೂತನ ಅಧ್ಯಕ್ಷ ರಂಜನ್ ಜಿ ಗೌಡ ತಿಳಿಸಿದ್ದಾರೆ.
ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಫೆ. 5  ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಾದ, ಮಾರ್ಗದರ್ಶನ ಪಡೆದು ಕಾರ್ಯಪ್ರವೃತ್ತರಾದ ನಮ್ಮ ಸಮುದಾಯ ಬೆಳ್ತಂಗಡಿ ತಾಲೂಕು ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಮುಖಾಂತರ ಸ್ವಜಾತಿ ಬಾಂಧವರ ಮನೆಮನೆ ಸಂಪರ್ಕ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ.
ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಮಂಗಳೂರು ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಮುಂದಡಿಯಿಟ್ಟು ಕಾರ್ಯಪ್ರವೃತರಾಗುತ್ತಿದ್ದೇವೆ. ಸಹಕಾರಿ ಸಂಘಗಳ ಅಧ್ಯಕ್ಷರಾಗಿ ಮತ್ತು ಇತರ ಪ್ರಮುಖ ರಂಗಗಳಲ್ಲಿ ಮುಖ್ಯಭೂಮಿಕೆಯಲ್ಲಿರುವ ಅನುಭವಿಗಳನ್ನು ನಿರ್ದೇಶಕ ಮಂಡಳಿ ಆಯ್ಕೆ ಮಾಡಿಕೊಂಡಿದ್ದೇವೆ. ಅನುಭವ ಹೊತ್ತಿರುವವರನ್ನೇ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಹಿತ ಸಿಬ್ಬಂದಿಗಳಾಗಿ ನೇಮಿಸಿ ಸದಾ ನಗುಮೊಗದ ಸೇವೆ ನೀಡಲು ಸನ್ನದ್ದರಾಗಿದ್ದೇವೆ. ನಮ್ಮ ಹಣಹಾಸು ಸಂಸ್ಥೆಯಲ್ಲಿ ನಮ್ಮ ಸಮುದಾಯಸ್ತರು ಮಾತ್ರವಲ್ಲದೆ ಎಲ್ಲ ಸಮಾಜ ಬಾಂಧವರೂ ವ್ಯವಹಾರದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಬಹುದಾಗಿದೆ ಎಂದರು. ಉದ್ಘಾಟನೆ ನಿಮಿತ್ತ ಸ್ವಾಮೀಜಿದ್ವಯರನ್ನು ಉಜಿರೆ ಜನಾರ್ದನ ದೇವಸ್ಥಾನದದಿಂದ ಭವ್ಯ ಮೆರವಣಿಗೆ ಮೂಲಕ ಕರೆತರಲಾಗುವುದು. ವಿಜಯರಾಘವ ಪಡುವೆಟ್ನಾಯ ಉದ್ಘಾಟನೆ ನಡೆಸಲಿದ್ದಾರೆ. ಮಾಜಿ ಸಚಿವ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಇಚ್ಚಿಲ ಸುಂದರ ಗೌಡ, ನಿರ್ದೇಶಕರಾದ ಕೇಶವ ಗೌಡ ಪಿ, ದಾಮೋಧರ ಗೌಡ ಸುರುಳಿ, ಸೇವಾ ಸಂಘದ ಅಧ್ಯಕ್ಷ ಕೇರಿಮಾರ್ ಬಾಲಕೃಷ್ಣ ಗೌಡ, ಪ್ರಮುಖರಾದ ತುಂಗಪ್ಪ ಗೌಡ, ಭsರತ್ ಗೌಡ ಬಂಗಾಡಿ, ಯುವ ವಿಭಾಗದ ಅಧ್ಯಕ್ಷ ಸುಧಾಕರ ಗೌಡ, ಸಿಇಒ ದಿನೇಶ್ ಗೌಡ ಕಲ್ಲಾಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.