ನಾರಾವಿ ತಿರ್ತೊಟ್ಟು ಸಪರಿವಾರ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ಶ್ರೀ ಬ್ರಹ್ಮಮಂಡಲ

Advt_NewsUnder_1
Advt_NewsUnder_1

ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿರ್ತೊಟ್ಟು ದಿ| ಬಾಬು ಪೂಜಾರಿ ಅವರ ಸ್ಮರಣಾರ್ಥವಾಗಿ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ| ಮಂಜುನಾಥ ಕಾಮತ್, ತೆಂಕುತಿಟ್ಟು ಭಾಗವತ ರವಿಚಂದ್ರ ಕನ್ನಡಿಕಟ್ಟೆ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣ ತಂತ್ರಿ ಹಾಗೂ ಸಹಕಾರ ನೀಡಿದ ಸುರೇಶ್ ಪೂಜಾರಿ ಬಾಂದೋಟ್ಟು ನಾರಾವಿ, ಪೂರ್ವಪ್ಪ ಪೂಜಾರಿ ಹರಲ್ದಡ್ಕ, ದಿನೇಶ್ ಪೂಜಾರಿ ಹಂಬಡ ಇವರನ್ನು ಸನ್ಮಾನಿಸಲಾಯಿತು.

ನಾರಾವಿ : ತುಳುನಾಡಿನಲ್ಲಿ ನಮ್ಮ ಹಿರಿಯರು ನಾಗದೇವರಿಗೆ ದೊಡ್ಡ ಸ್ಥಾನವನ್ನು ನೀಡಿದ್ದಾರೆ. ಬೆರ್ಮರ್ ಎಂದರೇ ನಾಗದೇವರು ಇದು ತುಳುನಾಡಿನ ದೊಡ್ಡ ಶಕ್ತಿ, ಶ್ರೀ ನಾಗಮಂಡಲ, ಶ್ರೀ ಬ್ರಹ್ಮಮಂಡಲ ನಾಗದೇವರಿಗೆ ಸಂದಾಯ ಮಾಡುವ ದೊಡ್ಡ ಸೇವೆ. ಈ ವಿಶೇಷ ಸೇವೆಯಿಂದ ಕುಟುಂಬಕ್ಕೆ ಹಾಗೂ ಊರಿಗೆ ಬರುವ ಅಪತ್ತು -ವಿಘ್ನಗಳು ದೂರವಾಗಿ ಮನ-ಮನಸ್ಸಿನಲ್ಲಿ ನೆಮ್ಮದಿ ನೆಲೆಸಿ, ಒಳ್ಳೆಯ ಉದ್ಯೋಗ, ಸಂಸಾರ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗಿತ್ತದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಫೆ. 2ರಂದು ಸಪರಿವಾರ ಶ್ರೀ ನಾಗಬ್ರಹ್ಮ ಕ್ಷೇತ್ರ ನಾರಾವಿ ತಿರ್ತೊಟ್ಟು, ಬನತ್ತಪಲ್ಕೆಯಲ್ಲಿ ನಡೆದ ಶ್ರೀ ಬ್ರಹ್ಮಮಂಡಲ ಸೇವೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಸಂಪಾದನೆಯಲ್ಲಿ ಸ್ವಲ್ಪ ತಾವು ದೇವರ ಮತ್ತು ಸಮಾಜದ ಸೇವೆಗೆ ಮೀಸಲಿಡಬೇಕು. ಪ್ರಪಂಚದಲ್ಲಿ ಏನೇ ಇದ್ದರು ಅದು ದೈವ-ದೇವರದ್ದು ನಮ್ಮದ್ದಲ್ಲಾ, ಗಾಳಿ, ನೀರು, ಮಣ್ಣು ಎಲ್ಲಾ ದೇವರದ್ದು, ಈ ಸೇವೆಯ ಮೂಲಕ ದೋಷಗಳು ನಿವಾರಣೆಯಾಗಿ ಸಂತೃಪ್ತಿ ಲಭಿಸುತ್ತದೆ ಎಂದರು.
ವೇದಿಕೆಯಲ್ಲಿ ತಿರ್ತೊಟ್ಟು ನಾರಾವಿ ಗುಳ್ಳಿ ಪೂಜಾರಿ, ಹಾಗೂ ಮಕ್ಕಳಾದ ವಸಂತ ಪೂಜಾರಿ, ಯಮುನಾ ವೈ ಪೂಜಾರಿ, ಕೃಷ್ಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಋತ್ವಿಗ್ವರಣೆ ಕಲಶ ಪ್ರಧಾನ ಹೋಮ, ನವಗ್ರಹಯಾಗ, ಪಂಚಾಮೃತ ಅಭಿಷೇಕ. ಕಲಶಾಭಿಷೇಕ, ಆಶ್ಲೇಷ ಬಲಿ, ವಟುವಾರಾಧನೆ, ಬ್ರಾಹ್ಮಣಾರಾಧನೆ, ಮಹಾಪೂಜೆ, ನಡೆಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾಂಗ್ರೇಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಶ್ರೀನಿವಾಸ ವಿ.ಕಿಣಿ ನಾರಾವಿ, ಗ್ರಾ.ಪಂ ಅಧ್ಯಕ್ಷ ರವೀಂದ್ರ ಪೂಜಾರಿ, ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ನಿರಂಜನ್ ಜೈನ್ ಬ್ರಾಮರಿಗುತ್ತು, ಪ್ರೇಮ್ ಕುಮಾರ್ ಹೊಸ್ಮಾರು, ವಸಂತ ಭಟ್ ನಾರಾವಿ, ರತ್ನಾಕರ ಬುಣ್ಣನ್ ಮರೋಡಿ, ತಾ.ಪಂ ಸದಸ್ಯ ಸುಧೀರ್ ಆರ್ ಸುವರ್ಣ ಮತ್ತಿತರರು ಭಾಗವಹಿಸಿದ್ದರು.
ಬಳಿಕ ಮೂಲ್ಕಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಹಾಗೂ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಹಾಗೂ ಪಲಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.