ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್ ಕಟಾ ವಿಭಾಗದಲ್ಲಿ ಶೋನಿಕಾ ವಿ.ಆರ್.ಬಂಗೇರ ಪ್ರಥಮ

ಮಡಂತ್ಯಾರು: ಮಂಗಳೂರಿನ ಹಂಪನಕಟ್ಟೆ ಕರ್ನಾಟಕ ಸರಕಾರಿ ನೌಕರರ ಅಸೋಸಿಯೇಷನ್ ಕಟ್ಟಡದ ನಂದಿನಿ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಹನ್ನೊಂದನೇ ವೆಸ್ಟೆರ್ನ್ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಕು| ಶೋನಿಕಾ ವಿ.ಆರ್.ಬಂಗೇರ ರವರು ಬ್ಲಾಕ್ ಬೆಲ್ಟ್ ಹುಡುಗಿಯರ ಹದಿಮೂರನೇ ವರ್ಷದ ವಯೋಮಿತಿಯ ವಿಭಾಗದಲ್ಲಿ ಭಾಗವಹಿಸಿ, ಕಟಾದಲ್ಲಿ ಪ್ರಥಮ ಸ್ಥಾನ, ಚಿನ್ನದ ಪದಕ, ಕುಮಿತೆಯಲ್ಲಿ ತೃತೀಯ ಸ್ಥಾನ, ಕಂಚಿನ ಪದಕ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ. ಅಲ್ಲದೆ ಇತ್ತೀಚೆಗೆ ಕೇರಳದ ಕಣ್ಣೂರು ಶ್ರೀಕಾಂತಪುರಂನಲ್ಲಿ ನಡೆದ ಎರಡು ದಿನದ ಕರಾಟೆ ಸೆಮಿನಾರ್‌ನಲ್ಲಿ ಭಾಗವಹಿಸಿ ಜಪಾನಿನ ಗ್ರಾಂಡ್ ಮಾಸ್ಟರ್ ಶಿಹಾನ್ ಕೌಶಕು ಯೋಕೋತ ಇವರಿಂದ ತರಬೇತಿ ಪಡೆದು ಪ್ರಮಾಣ ಪತ್ರಗಳಿಸಿ ಜಿಲ್ಲೆಯಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಶೋನಿಕಾರವರು ಮಂಗಳೂರು ಇನ್ಸ್ಟಿಟ್ಯೂಟ್ ಆರ್.ವಿ. ಟೈಗರ್ ಮಾರ್ಷಲ್ ಆರ್ಟ್ಸ್ ಕರಾಟೆ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಆಲದಪದವು ಅಕ್ಷರ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಮಡಂತ್ಯಾರು ಪಾರೆಂಕಿ ನಿವಾಸಿ ಕರಾಟೆ ನಿರ್ದೇಶಕ ಶಿಹಾನ್ ವಸಂತ. ಕೆ. ಬಂಗೇರ ದಂಪತಿ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.