HomePage_Banner_
HomePage_Banner_
HomePage_Banner_

ದೇಸಾಯಿ ಬೀಡಿ ಗುತ್ತಿಗೆದಾರರಾಗಿದ್ದ ಪಿ ಮುಹಮ್ಮದ್ ಪಣಕಜೆ

ಪಣಕಜೆ: ಮೂಲತಃ ವೇಣೂರು ಗೋಳಿಯಂಗಡಿಯವರಾಗಿದ್ದು ಪ್ರಸ್ತುತ ಪಣಕಜೆಯಲ್ಲಿ ನೆಲೆಸಿದ್ದ ದೇಸಾಯಿ ನೀಡಿ ಗುತ್ತಿಗೆದಾರರಾಗಿದ್ದ ಪಿ ಮುಹಮ್ಮದ್ (85ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಜ. 24  ರಂದು ನಿಧನರಾಗಿದ್ದಾರೆ. ಇವರು ಕಕ್ಕಿಂಜೆ ಮತ್ತು ಗೋಳಿಯಂಗಡಿ ಭಾಗದಲ್ಲಿ ಅನೇಕ ವರ್ಷಗಳ ಕಾಲ ಬೀಡಿ ಗುತ್ತಿಗೆದಾರರಾಗಿದ್ದು ಅನೇಕ ಮಂದಿಗೆ ಉದ್ಯೋಗ ಅವಕಾಶ, ದುಡಿಮೆಯ ವೃತ್ತಿ ಒದಗಿಸಿಕೊಟ್ಟಿದ್ದರು. ಸರಳ ಸಜ್ಜಿನಿಯ ವ್ಯಕ್ತಿಯಾಗಿದ್ದ ಅವರು ಪರೋಪಕಾರಿಯೂ ಆಗಿ ಎಲ್ಲ ಜಾತಿ ಧರ್ಮದವರ ಪ್ರೀತಿ ಆದರಗಳಿಗೆ ಪಾತ್ರರಾಗಿದ್ದರು. ಕುಂಡದಬೆಟ್ಟು ಮಸೀದಿ ಆಡಳಿತ ಸಮಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇರಿದಂತೆ ಧಾರ್ಮಿಕ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಬೀಫಾತುಮಾ, ಪುತ್ರರಾದ ಲತೀಫ್, ಝಾಕಿರ್ ಹುಸೈನ್, ಶರೀಫ್ ಮತ್ತು ಅಶ್ರಫ್, ಪುತ್ರಿಯರಾದ ಝುಹುರಾ, ಝುಬೈದಾ ಅಬೂಬಕ್ಕರ್ ಕಕ್ಕಿಂಜೆ, ರಝಿಯಾ ಮತ್ತು ದುಲೈಕಾ ಹೈದರ್ ಎಂ.ಆರ್ ಮಡಂತ್ಯಾರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.