ಶ್ರುತಿ-ಲಯ ಕ್ಲಾಸಿಕಲ್ಸ್ ವತಿಯಿಂದ ಗಾನ ನಮನ ಕಾರ್ಯಕ್ರಮ

ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಂಗೀತ ಸಹಕಾರಿ: ಮಧೂರು ಮೋಹನ ಕಲ್ಲೂರಾಯ

ಬೆಳ್ತಂಗಡಿ: ಸಂಗೀತ ಎಂಬುದು ಮನುಷ್ಯನ ಬದುಕಿನ ಉಸಿರಿನ ಜೊತೆಯಲ್ಲಿ ಮೇಳೈಸಿಕೊಂಡಿದೆ. ವ್ಯಕ್ತಿಯೊಬ್ಬ ಚೆನ್ನಾಗಿ ಮತ್ತೊಬ್ಬರಿಗೆ ಪರಿಣಾಮಕಾರಿಯಾಗಿ ನಾಡುತ್ತಾನೆಂದರೆ ಅವನ ಮಾತಿನ ಸ್ವರದಲ್ಲಿ ಸಂಗೀತ ಇದೆ ಎಂದು ಅರ್ಥ, ಸಂಗೀತ ಇವತ್ತು ಮಾನಸಿಕ ಒತ್ತಡ ಕಡಿಮೆ ಮಾಡುವ ಮಾಧ್ಯಮಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೈಜ್ಞಾನಿಕವಾಗಿ ಪ್ರಕೃತಿ ಕೂಡ ಸಂಗೀತಕ್ಕೆ ಸ್ಪಂದಿಸುತ್ತದೆ ಎಂದು ವಿಜ್ಞಾನಿಗಳೂ ಕೂಡ ದೃಢಪಡಿಸಿದ್ದಾರೆ ಎಂಬುದು ಗಮನಾರ್ಹ ಅಂಶ ಎಂದು ರಾಮಕುಂಜೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ಮಧೂರು ಮೋಹನ ಕಲ್ಲೂರಾಯ ಹೇಳಿದರು.
ಶ್ರುತಿ-ಲಯ ಕ್ಲಾಸಿಕಲ್ಸ್  ಇದರ ವತಿಯಿಂದ ಬೆಳ್ತಂಗಡಿ ಮಹಿಳಾ ವೃಂದ ಸಭಾಂಗಣದಲ್ಲಿ ಫೆ. 3 ರಂದು ಆಯೋಜನಗೊಂಡಿದ್ದ ಶ್ರೀ ಪುರಂದರದಾಸರು ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಗಾನನಮನ ವಿಶೇಷ ಕಾರ್ಯಕ್ರಮದಲ್ಲಿ ಅವರು ಉದ್ಘಾಟಕರಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಗೀತ ಶಿಕ್ಷಕಿ ಶ್ಯಾಮಲಾ ನಾಗರಾಜ್ ಅವರು ಮಾತನಾಡಿ, ನನ್ನದು 33 ವರ್ಷಗಳ ಸಂಗೀತ ಪರಂಪರೆ, ನನ್ನ ಶಿಷ್ಯಂದಿರು ಇಂದು ಸಂಗೀತ ಶಿಕ್ಷಕ ವೃತ್ತಿ ನಡೆಸುತ್ತಿದ್ದಾರೆಂಬುದು ಹೆಮ್ಮೆ ತರುತ್ತದೆ. ಶಿಷ್ಯಂದಿರು ಗುರುವನ್ನು ಮೀರಿ ಬೆಳೆಯಬೇಕು ಅದು ಗುರುವಿಗೂ ಹೆಮ್ಮೆ ಎಂದರು. ಅಲ್ಲದೆ ತನ್ನ ಇಷ್ಟೂ ವರ್ಷದ ಸಂಗೀತ ಕ್ಷೇತ್ರದ ಪಯಣದಲ್ಲಿ ನೆರವಾದವರನ್ನು ನೆನೆದರು.
ಗೋಷ್ಠಿ ಗಾಯನ:
ಸಮಾರಂಭದಲ್ಲಿ ಶ್ರುತಿ-ಲಯ ಕ್ಲಾಸಿಕಲ್ಸ್ ಇದಕ್ಕೆ ಸಂಬಂಧಪಟ್ಟ 10  ತರಬೇತಿ ಶಾಲೆಗಳ ಸಂಗೀತ ಶಿಷ್ಯರು ಸೇರಿ ಪ್ರತಿಭಾ ಕೌಶಲ್ಯ ಪ್ರದರ್ಶನ ನಡೆಸಿದರು. ಶ್ರೀ ಪುರಂದರ ದಾಸರ ಪಿಳ್ಳಾರಿಗೀತೆ ಹಾಗು ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿಗಾಯನ ನಡೆಯಿತು. ಸಹವಾದನದಲ್ಲಿ ಕೆ. ಆರ್ ಶಾಂತಾ ಉಜಿರೆ, ವಸಂತಕೃಷ್ಣ ಕಾಂಚನ, ಶ್ರೀಪ್ರಿಯಾ ಪರಕ್ಕಜೆ, ಗೌರಿಪ್ರಸಾದ್ ಗುರುವಾಯನಕೆರೆ, ಗುರುರಾಜ್ ಉಜಿರೆ ಸಹಕಾರ ನೀಡಿದರು. ಗೌತಮಿ, ಭಾರ್ಗವಿ,ಸುವರ್ಣ ಕುಮಾರ್ ಸಹಿತ ಸಂಗೀತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತುಂಬು ಸಹಕಾರದೊಂದಿಗೆ ಸಂಜೆಯವರೆಗೂ ಕಾರ್ಯಕ್ರಮ ಸಾಂಗವಾಗಿ ನಡೆಯಿತು.
ಶಿಕ್ಷಕಿ ಕೃಷ್ಣವೇಣಿ ನಿರೂಪಿಸಿದರು. ಮಂಗಳಾ ಗುರುವಾಯನಕೆರೆ ಸ್ವಾಗತಿಸಿದರು. ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.