ಅನುಗ್ರಹ ಸಂಸ್ಥೆಗಳಿಗೆ ಕಾವಲಕಟ್ಟೆ ಡಾ. ಹಝ್ರತ್ ಭೇಟಿ

Advt_NewsUnder_1
Advt_NewsUnder_1

ಬೆಳ್ತಂಗಡಿ: ಅಲ್ ಖಾದಿಸ ಎಜುಕೇಷನ್ ಅಕಾಡಮಿ ಇದರ ಚೇರ್ಮೆನ್, ಅಂತಾರಾಷ್ಟ್ರೀಯ ಧಾರ್ಮಿಕ ವಿದ್ವಾಂಸ, ಕಾವಳಕಟ್ಟೆ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಬೆಳ್ತಂಗಡಿಯ ಅನುಗ್ರಹ ಸಂಸ್ಥೆಗಳಿಗೆ ಭೇಟಿ ನೀಡಿದರು.
ಸಂಸ್ಥೆಗೆ ಮೊದಲ ಭೇಟಿ ನೀಡಿದ ಹಝ್ರತ್ ದುವಾ ಪ್ರಾರ್ಥನೆಗೈದು ಸಂಸ್ಥೆಯ ವೃತ್ತಿ ಪರ ತರಬೇತಿಗಳ ಬಗ್ಗೆ ಮಾಹಿತಿ ಪಡೆದು ಶ್ಲಾಘಿಸಿದರು. ಬಳಿಕ ಅನುಗ್ರಹ ಸ್ಕೂಲ್ ಬುಕ್ ಕಂಪೆನಿಗೆ ಭೇಟಿ ನೀಡಿ ದುವಾ ನೆರವೇರಿಸಿದರು. ಅನುಗ್ರಹ ಜನಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ನೀಡುವ ಸೇವೆಗಳ ಮಾಹಿತಿ ಪಡೆದು ಶುಭ ಹಾರೈಸಿದರು. ಇತ್ತೀಚೆಗೆ ಶುಭಾರಂಭಗೊಂಡ ಅನುಗ್ರಹ ಕೆಫೆಟೇರಿಯಾಗೆ ಭೇಟಿಮಾಡಿ ಅಲ್ಲಿಯ ವಿಶೇಷತೆಗಳ ಬಗ್ಗೆ ತಿಳಿದು ಉತ್ತಮ ಅಭಿಪ್ರಾಯ ಹಂಚಿಕೊಂಡರು.
ಭೇಟಿ ಮಾಡಿದ ಗುರುಗಳಿಗೆ ಅನುಗ್ರಹ ಸಮೂಹ ಸಂಸ್ಥೆಗಳ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಭೇಟಿ ವೇಳೆ ಬೆಳ್ತಂಗಡಿ ಗೌಸಿಯಾ ಜಾಮಿಯಾ ಮಸೀದಿಯ ಧರ್ಮ ಗುರು ಸಯ್ಯಿದ್ ಮೊಹಮ್ಮದ್ ಗುಲ್ ರೇಝ್ ಅಹಮ್ಮದ್ ರಝ್ವಿ , ಅನುಗ್ರಹ ಸಮೂಹ ಸಂಸ್ಥೆಗಳ ಚೇರ್ಮೆನ್ ಎಂ ಜಿ ತಲ್‌ಹತ್ ಸವಣಾಲು, ಅನುಗ್ರಹ ಗ್ರೂಪ್ ಟ್ರಸ್ಟಿಗಳಾದ ಅಬ್ದುಲ್ ರಶೀದ್ ನಹೀಮಿ ಬೆಂಗಳೂರು, ಮುಹಮ್ಮದ್ ಅಶ್ರಫ್ ಫೈಝಿ, ಕಾಲೇಜು ಪ್ರಾಂಶುಪಾಲ ಜೈಸನ್ ಪಟ್ಟೇರಿಲ್, ಸಂಸ್ಥೆಯ ಮ್ಯಾನೇಜರ್ ಸ್ವಾದಿಕ್ ಬೆಳ್ತಂಗಡಿ, ಉಪಪ್ರಾಂಶುಪಾಲ ರಾಜೇಶ್ ಸಚ್ಚೇರಿಪೇಟೆ, ಉಪನ್ಯಾಸಕ ಸಜಿತ್ ಅಳದಂಗಡಿ ಆಗೂ ಎಲ್ಲಾ ಸಿಬ್ಬಂದಿಗಳು ಜೊತೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.