ಪುಂಜಾಲಕಟ್ಟೆ: ನಿವೃತರಿಗೆ ಬೀಳ್ಕೊಡುಗೆ, ಪ್ರಶಸ್ತಿಗಾಗಿ ಸನ್ಮಾನ

ಪುಂಜಾಲಕಟ್ಟೆ: ಸಮೂಹ ಸಂಪನ್ಮೂಲ ಕೇಂದ್ರ ಪುಂಜಾಲಕಟ್ಟೆ ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರ ಪರವಾಗಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಸೋಣಂದೂರು ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಹೆಬ್ಬಾರ್ ಅವರನ್ನು ಬೀಳ್ಕೊಡಲಾಯಿತು.
ಜೊತೆಗೆ 2018 ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನೆತ್ತರ ಶಾಲಾ ಶಿಕ್ಷಕ ಸೀತಾರಾಮ ಇವರಿಗೆ ಸನ್ಮಾನ ನಡೆಯಿತು.
ಬೆಳ್ತಂಗಡಿ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರುಗಳಾದ ರಮೇಶ್, ಸುಭಾಶ್ ಜಾದವ್, ಕ.ರಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಅಭಿನಂದನಾ ಪತ್ರವನ್ನು ಸುರೇಶ್ ಶೆಟ್ಟಿ ವಾಚಿಸಿದರು. ರಘುಪತಿ ಕೆ ರಾವ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪುಂಜಾಲಕಟ್ಟೆ ಮುಖ್ಯೋಪಾಧ್ಯಾಯ ಮೋನಪ್ಪ ಕೆ ಸ್ವಾಗತಿಸಿ, ಧನ್ಯವಾದವಿತ್ತರು.
ವರದಿ: ರಘುಪತಿ ರಾವ್.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.