ಉಜಿರೆಯಲ್ಲಿ ರಾಷ್ಟ್ರೀಯ ಹಿಂಜಾವೇ ವತಿಯಿಂದ ರಾಜ್ಯಮಟ್ಟದ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಮಾದರಿ ಪುರುಷರ ಮ್ಯಾಟ್ ಕಬಡ್ಡಿ ಮುಕ್ತ ಪಂದ್ಯಾಟ ಸೌಜನ್ಯಾ ಟ್ರೋಫಿ ಉದ್ಘಾಟನೆ

ಉಜಿರೆ: ಜಾತಿ, ಮತ, ಪಕ್ಷವೆಂಬ ಭೇದ ದೂರವಿಟ್ಟು ಕೇವಲ ದೇಶ ಎಂಬ ಭಾವನೆ ಜಾಗೃತಿಗೊಳಿಸುವ ಉದ್ಧೇಶದಿಂದ ಇಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಈ ಕಬಡ್ಡಿ ಕ್ರೀಡಾಕೂಟ ಹಮ್ಮಿಕೊಂಡಿದೆ. ಭಾರತ ಬ್ರಿಟೀಷರ ಆಕ್ರಮಣಕ್ಕೊಳಗಾಗಿದ್ದ ವೇಳೆ ಅದರ ಪರಿಣಾಮದಿಂದಾಗಿ ಸ್ವದೇಶಿ ಕ್ರೀಡೆ ಕಬಡ್ಡಿಗೆ ಮಹತ್ವ ಸಿಕ್ಕಿಲ್ಲ, ದೇಶಭಕ್ತಿ ಮತ್ತು ಸ್ವದೇಶಿ ಭಾವನೆ ಮೂಡಿಸುವ ಅಗತ್ಯತೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇಂದು ನಮ್ಮಲ್ಲಿ ಜಾತಿ, ಭಾಷೆ, ಪಕ್ಷ, ಕುಟುಂಬ, ದೇವರ ಮೇಲಿನ ಪ್ರೇಮಗಳು ಹೇರಳವಾಗಿ ಕಾಣುತ್ತಿದ್ದರೂ ದೇಶ ಭಕ್ತಿ ಕಡಿಮೆಯಾಗಿದೆ. ಅದನ್ನು ಬಡಿದೆಬ್ಬಿಸಿ ಜಾಗೃತಿಗೊಳಿಸುವ, ದೇಶಭಕ್ತಿಯ ಜಾಗರಣೆ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾ| ಸಮಿತಿ ವತಿಯಿಂದ ಫೆ. 2 ರಂದು ಉಜಿರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಮಾದರಿ ಪುರುಷರ ಮ್ಯಾಟ್ ಕಬಡ್ಡಿ ಮುಕ್ತ ಪಂದ್ಯಾಟ ಸೌಜನ್ಯಾ ಟ್ರೋಫಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ  ಮಾಜಿ ಶಾಸಕ ವಸಂತ ಬಂಗೇರ , ರಾಜ್ಯ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ,ತಾ| ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಂಜನ್ ಜಿ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್, ಬರ್ಕೆ ಫ್ರೆಂಡ್ಸ್ ಮಂಗಳೂರು ಸಂಸ್ಥಾಪಕ ಯಜ್ಞೇಶ್ವರ, ಗೆಜ್ಜಿಗಿರಿ ಕೋಟಿ ಚೆನ್ನಯ್ಯ ಕ್ಷೇತ್ರ ಪ್ರ. ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಮಾಜಿ ರಾಷ್ಟ್ರೀಯ ಕಬಡ್ಡಿ ಅಟಗಾರ ಉದಯ ಚೌಟ, ಸಾಹಿತಿ ಅತ್ಯಾಡಿ ಅಮೃತಾ ಶೆಟ್ಟಿ, ಸೌಜನ್ಯಾ ಪಾಂಗಾಳರ ತಾಯಿ ಕುಸುಮಾವತಿ, ಜೆಸಿಐ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ನಾಮದೇವ ರಾವ್ ಮುಂಡಾಜೆ, ತಾ| ಕಾರ್ಯಾಧ್ಯಕ್ಷ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಜಯಕರ್ನಾಟಕ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಉದ್ಯಮಿ ಶಿವಕಾಂತ ಗೌಡ, ಗುತ್ತಿಗೆದಾರ ಶ್ರೀನಿವಾಸ ಗೌಡ, ಮೋಹನ ಚೌಧರಿ, ಸಚಿನ್ ನೂಜೋಡಿ, ಚಿತ್ರೇಶ್ ಶೆಟ್ಟಿ, ಗಂಗಾಧ ಪೂಜಾರಿ ಕಜೆಕಾರು, ಪ್ರಶಾಂತ್ ಮಚ್ಚಿನ ಮೊದಲಾದ ಗಣ್ಯರುಗಳು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಹಿಂದೂ ಜಗರಣ ವೇದಿಕೆ ಸಂಸ್ಥಾಪಕ ಮಹೇಶ್‌ಶೆಟ್ಟಿ ತಿಮರೋಡಿ ಮಾತನಾಡಿ, ಸಮಾಜ ಧರ್ಮ ವಿರೋಧಿಯಾಗಿ ನಡೆಯುತ್ತಿದೆ. ಸಂವಿಧಾನ, ರಾಜ್ಯಾಂಗ-ಕಾನೂನು ಅದಕ್ಕಿಂತಲೂ ಮಿಕ್ಕಿದ ಪ್ರಜಾಪ್ರಭುತ್ವ ಇದ್ದರೂ ಅವುಗಳ ಮೇಲೆ ನಂಬಿಕೆ ಕ್ಷೀಣಿಸಿದೆ ಎಂಬುದು ನಮ್ಮ ವೈಯುಕ್ತಿಕ ಅಭಿಪ್ರಾಯ. ಎಲ್ಲಿ ಅತ್ಯಾಚಾರ, ಅಧರ್ಮಕ್ಕೊಳಗಾಗುತ್ತಿದ್ದಾರೋ ಅಂತವರಿಗೆ ಸಾಮಾಜಿಕ ನ್ಯಾಯ ಕೊಡಲು ಹಿಂದೂ ಜಾಗರಣ ವೇದಿಕೆ ಪ್ರಾರಂಭ ಮಾಡಿದ್ದೇವೆ. ನಾವು ಬಾಯಲ್ಲಿ ಮಾತನಾಡುವುದಿಲ್ಲ, ಕೈಯ್ಯಲ್ಲಿ ಮಾಡಿ ತೋರಿಸುತ್ತೇವೆ. ಮುಂದಿನ ವರ್ಷ ನಮ್ಮ ಸಂಘಟನೆ ಆಶ್ರಯದಲ್ಲಿ 4 ರಾಜ್ಯಗಳನ್ನು ಸೇರಿಸಿ ದಕ್ಷಿಣ ಭಾರತ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜನೆ ಮಾಡುತ್ತೇವೆ ಎಂದರು.

ರಾಷ್ಟ್ರೀಯ ಹಿಂಜಾವೇ ಗೌರವಾಧ್ಯಕ್ಷ ರವಿ ಕುಮಾರ್ ಬರೆಮೇಲು ಸ್ವಾಗತಿಸಿದರು. ತಾ. ಅಧ್ಯಕ್ಷ ಅನಿಲ್ ಕುಮಾರ್   ಪ್ರಾಸ್ತಾವನೆಗೈದರು.  ಸಾಮಾಜಿಕ ಜಾಲತಾಣ ಸಂಚಾಲಕ ಪ್ರಜ್ವಲ್ ಕೆ.ವಿ ಗೌಡ, ಸಂಚಾಲಕ ಮನೋಜ್ ಕುಂಜರ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಮುಖೇಶ್ ಶೆಟ್ಟಿ ಪಾಣ್ಯಾಲು, ಪ್ರ. ಸಂಚಾಲಕ ಉಮೇಶ್ ಪೂಜಾರಿ ಅತ್ತಾಜೆ, ಕಾರ್ಯದರ್ಶಿ ಶಶಿಧರ ಗೌಡ ಪೆರಿಯಡ್ಕ ಮತ್ತು ಕಾರ್ಯಕರ್ತರು ಯಶಸ್ವಿಗೆ ಸಹಕರಿಸಿದರು.
ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮಂದರ್ಸ ವಂದನಾರ್ಪಣೆಗೈದರು. ವೀಕ್ಷಕ ವಿವರಣೆ ಮತ್ತು ಉದ್ಘೋಷಗಳನ್ನು ಫ್ರಾನ್ಸಿಸ್ ವಿ.ವಿ, ವಿಜಯ ಅತ್ತಾಜೆ ಮತ್ತು ನಿಸಾರ್ ಗುರುವಾಯನಕೆರೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.