ಫೆ.13: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ಕಾಲಾವಧಿ ನೇಮೋತ್ಸವವು ಫೆ .12 ಮತ್ತು ಫೆ .13ರಂದು ಜರುಗಲಿದೆ ಎಂದು ಕ್ಷೇತ್ರದ ಮೊಕ್ತೇಸರ ರಾಜೀವ ಅವರು ತಿಳಿಸಿದ್ದಾರೆ.
ಫೆ.12ರಂದು ಗಣಹೋಮ, ಶ್ರೀ ನಾಗಬ್ರಹ್ಮ ದೇವರಿಗೆ ತನು ತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ ಸಂಜೆ ದುರ್ಗಾಪೂಜೆ, ಉದ್ಭವ ಮಹಾಗಣಪತಿಗೆ ಮತ್ತು ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಜೋಡುರಂಗಪೂಜೆ, ನಂತರ ಸೇವಾಕರ್ತರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಫೆ.13ರಂದು ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ ಪಂಚಾಮೃತ ಅಭಿಷೇಕ, 10ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಸಂಜೆ 5ಕ್ಕೆ ಮಹಾಪೂಜೆ ಬಳಿಕ ಅಮ್ಮನವರ ಉತ್ಸವ ಬಲಿ, ರಾತ್ರಿ 7ಕ್ಕೆ ದೈವಗಳ ಭಂಡಾರ ತೆಗೆಯುವುದು, ಉತ್ಸವ ಬಲಿ ನಂತರ `ವಂಶಿಕ ಗೊಂಬೆ ಬಳಗ ಇವರಿಂದ ಕೀಲು ಕುದುರೆ ಮತ್ತು ಗೊಂಬೆ ಕುಣಿತ.
ರಾತ್ರಿ 10ಕ್ಕೆ ಶ್ರೀ ವರಾಹಿ ಮಂತ್ರಮೂರ್ತಿ, ಶ್ರೀ ನಾಗಕಲ್ಲುರ್ಟಿ, ಶ್ರೀ ಶಕ್ತಿದೇವತೆ ದೈವಗಳ ಮತ್ತು ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ ಮತ್ತು ಉತ್ಸವ ಬಲಿ. ರಾತ್ರಿ 10.30ಕ್ಕೆ ಶ್ರೀ ದೈವಗಳು ಕೆಳಗಿನ ಅಂಗಣಕ್ಕೆ ಇಳಿಯುವುದು ಮತ್ತು ನೇಮೋತ್ಸವ, ಪ್ರಾತಃಕಾಲ 6ಕ್ಕೆ ಶ್ರೀ ಗುಳಿಗರಾಜ ದೈವದ ನೇಮೋತ್ಸವ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ಸಂಜೆ ಅನ್ನಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.