ಮುಂಡಾಜೆ ಪ.ಜಾತಿ ಕಾಲೊನಿ ರಸ್ತೆ ಡಾಂಬರೀಕರಣಕ್ಕೆ ಶಿಲಾನ್ಯಾಸ

ಮುಂಡಾಜೆ: ಇಲ್ಲಿಯ ಚಾಮುಂಡಿನಗರ ಪ.ಜಾತಿ ಕಾಲೋನಿ ರಸ್ತೆ  ಡಾಂಬರೀಕರಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ  ಫೆ.2 ರಂದು ಶಿಲಾನ್ಯಾಸ ನೆರವೇರಿಸಿದರು. ಅರ್ಚಕ ಸತ್ಯನಾರಾಯಣ ಹೊಳ್ಳರವರು ಗುದ್ದಲಿ ಪೂಜೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ನಮಿತಾ ಕೆ, ತಾ.ಪಂ ಸದಸ್ಯೆ ಲೀಲಾವತಿ,ಗ್ರಾ.ಪಂ ಅಧ್ಯಕ್ಷೆ ಶಾಲಿನಿ ವಿಜಯಕುಮಾರ್, ಗ್ರಾ.ಪಂ. ಸದಸ್ಯರಾದ ಗಣೇಶ್ ಬಂಗೇರ, ಸುಮನಾ ಗೋಖಲೆ, ಸುರೇಶ್ ಹೆಗ್ಡೆ, ಗ್ರಾ.ಪಂ ಕಾರ್ಯದರ್ಶಿ ಸಂಜೀವ ನಾಕ್, ಮುಂಡಾಜೆ ಪರಶುರಾಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಡೂರು ವೆಂಕಟ್ರಾಯ, ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್, ಪ್ರಮುಖರಾದ ಅಗರಿ ರಾಮಣ್ಣ ಶೆಟ್ಟಿ, ಮಚ್ಚಿಮಲೆ ಅನಂತ ಭಟ್, ಎಂ.ವಿಶ್ವನಾಥ ಶೆಟ್ಟಿ, ಮತ್ತಿತರ ಗಣ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.