HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೊಕ್ಕಡ: ಎಂಡೋಪೀಡಿತ ಯುವಕ ಸಾವು

ಕೊಕ್ಕಡ: ಇಲ್ಲಿಯ ಹಲ್ಲಿಂಗೇರಿ ನಿವಾಸಿ ಮಹೇಶ್ (26.ವ) ರವರು  ಎಂಡೋಪೀಡಿತ ಹೃದಯ ಸಂಬಂದಿ ಕಾಯಿಲೆಯಿಂದ ಜ.31 ರಂದು  ಮಂಗಳೂರಿನ  ಆಸ್ಪತ್ರೆಯೊಂದರಲ್ಲಿ  ನಿಧನರಾದರು. ಇವರು ಕಳೆದ  ಒಂದೂವರೆ ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೊಳಗಾಗಿ ತೀರಾ ಅಸ್ವಸ್ಥರಾಗಿದ್ದು, ಎಂಡೋಸಲ್ಫಾನ್ ಪೀಡಿತರಾಗಿ ಗುರುತಿಸಲ್ಪಟ್ಟಿದ್ದರು. ಕೆಲವು ತಿಂಗಳು ಕಾಲ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರೂ ಕಳೆದ ಹತ್ತು ದಿನಗಳಿಂದ ಇವರಿಗೆ ಮತ್ತೆ ತೊಂದರೆ ಕಾಣಿಸಿಕೊಂಡು ಮಂಗಳೂರಿನ ಆಸ್ಪತ್ರಯೊಂದಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ  ಮೃತಪಟ್ಟಿದ್ದಾರೆ .

 ಮಹೇಶ್ ರವರು ಕೊಕ್ಕಡದ ಯುವ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷರಾಗಿದ್ದರು.  ಮೃತರು  ತಂದೆ  ಲಕ್ಷ್ಮಣ ಗೌಡ , ತಾಯಿ ಅನಿತಾ  ಹಾಗೂ ಇಬ್ಬರು ಸಹೋದರರನ್ನು  ಅಗಲಿದ್ದಾರೆ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.