ಕನ್ಯಾಡಿ: ಚಿಣ್ಣರ ಮೆಟ್ರಿಕ್ ಮೇಳ

ಕನ್ಯಾಡಿ : ಸ.ಹಿ.ಪ್ರಾ.ಶಾಲೆ, ಕನ್ಯಾಡಿ-1 ಇಲ್ಲಿಯ ಶಾಲಾ ಮೆಟ್ರಿಕ್ ಮೇಳವನ್ನು ಜ. 23 ರಂದು ಹಮ್ಮಿಕೊಳ್ಳಲಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಇವರು ಮೇಳದ ಉದ್ಘಾಟನೆ ನೆರವೇರಿಸಿದರು.

ತದನಂತರ ವಿದ್ಯಾರ್ಥಿಗಳು ತಾವು ಮನೆಯಿಂದ ತಂದ ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ತಿಂಡಿಗಳು ಹಾಗೂ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿದರು. ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಗ್ರಾಹಕರಾಗಿ ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮಾರಾಟ ಪ್ರಕ್ರಿಯೆಯಲ್ಲಿ ತಮಗೆ ಆದ ಸುಂದರ ಅನುಭವಗಳನ್ನು ಹಂಚಿಕೊಂಡರು. ಅತೀ ಹೆಚ್ಚು ಮಾರಾಟ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನೋಣಯ್ಯ ಗೌಡ, ಮುಖ್ಯೋಪಾಧ್ಯಾಯಿನಿ ಹಿಲ್ಡಾ ಮೋರಸ್ ಬಂಗಾಡಿ, ಸಿ.ಆರ್.ಪಿ. ರಮೇಶ್.ಎಂ , ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಧಾಮಾಧವ ಭಟ್, ಆನಂದ ಗೌಡ, ಶಾಲಾ ಶಿಕ್ಷಕರಾದ ವಿಕಾಸ ಕುಮರ್, ವೈ, ರವಿಕುಮಾರ್, ಗೌರವಶಿಕ್ಷಕಿಯರಾದ ಕು|ಭವ್ಯ ಹಾಗೂ ಕು| ಅಶ್ವಿನಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.