ನ್ಯಾಯತರ್ಪು : ನಾಳ ವರ್ಷಾವಧಿ ಜಾತ್ರೆ ಸಂಪನ್ನ

 

ನಾಳ :  ನಾಳ ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ವ್ಯವಸ್ಥಾಪನ ಸಮಿತಿ, ಅಭಿವೃದ್ಧ ಸಮಿತಿ,ಅರ್ಚಕ ವೃಂದ ಹಾಗೂ ಊರವರ ನೇತೃತ್ವದಲ್ಲಿ ಜ.24  ರಂದು ಧ್ವಜ ರೋಹಣ, ಗ್ರಾಮಸ್ಥರಿಂದ ವಿಜ್ರಂಭಣೆಯ ಹೊರೆ ಕಾಣಿಕೆ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜ.30  ರಂದು ಸಂಭ್ರಮದಿಂದ ಸಂಪನ್ನ ಗೊಂಡಿದೆ. ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯ ರವರ ಮಾರ್ಗದರ್ಶನದಲ್ಲಿ ಜ.24  ರಂದು ಧ್ವಜಾರೋಹಣ ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ರಾತ್ರಿ ವಸಂತಕಟ್ಟೆಯಲ್ಲಿ ಪೂಜೆ ,ಹಾಗೂ ಸ್ಥಳೀಯ ಗೋವಿಂದೂರು, ರಕ್ತೇಶ್ವರಿ ಪದವು ಅಂಗನವಾಡಿ ಕೇಂದ್ರ.ಪ್ರಾ.ಶಾ.ರಕ್ತೇಶ್ವರಿ ಪದವು,ಸರಕಾರಿ ಪ್ರೌಢಶಾಲೆ ಗೇರುಕಟ್ಟೆ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯ ರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಜ.25  ರಂದುರಂದು ಕೆರೆಕಟ್ಟೆ ಉತ್ಸವ, ನಾಳ ಅಂಗನವಾಡಿ ಕೇಂದ್ರ, ನಾಳ ಹಿ.ಪ್ರಾ.ಶಾಲೆ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೇಸರಿ ಗೆಳೆಯರ ಬಳಗ ಮೋಕೆದ ಕಲಾವಿದರಿಂದ ಒಕ್ಕೆಲ್ ಒರಿಯಂದ್ ತುಳು ಸಾಮಾಜಿಕ ನಾಟಕ.ಜ.26  ರಂದು ಚಂದ್ರ ಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ, ನಿತ್ಯ ಬಲಿ ರಾತ್ರಿ ಹಿ.ಪ್ರಾ. ಶಾಲೆ ಕೊರಂಜ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಳ ವೀರ ಕೇಸರಿ ಪ್ರಾಯೋಜಕತ್ವ ದಲಿ ಕುಸಲ್ದ ಕುರ್ಲರಿ ಹಾಸ್ಯ ಕಾರ್ಯಕ್ರಮ ಜ.27  ರಂದು ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾ ಆನ್ನಸಂತರ್ಪಣೆ, ಸಂಜೆ ಪಿಲಿಚಾಮುಂಡಿ ಮತ್ತು ಕೊಡಮಣಿತ್ತಾಯಿ ದೈವದ ಗಗ್ಗರ ಸೇವೆ,ಮಹಾ ರಥೋತ್ಸವ ಶ್ರೀ ಭೂತ ಬಲಿ ಕವಟ ಬಂಧನ, ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮುಲ್ಕಿ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ ರಂಗ್ ಸಂಗೀತ ರಸಮಂಜರಿ ಕಾರ್ಯಕ್ರಮ. ವಿಶೇಷವಾಗಿ ರಥವನ್ನು ಪುಷ್ಪ ಹಾಗೂ ವಿಧ್ಯುದ್ವೀಪಾಲಂಕಾರಗಳಿಂದ ಅಲಂಕಾರಿಸಲಾಗಿತ್ತು. ಸುಡುಮದ್ದು ಪ್ರದರ್ಶನ ವಿಶೇಷ ಆಕರ್ಷಣೆಯಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.ಜ.28 ರಂದು ಸುಲಗ್ನದಲ್ಲಿ ಕವಾಟೋದ್ಘಾಟನೆ, ದಿವ್ಯ ದರ್ಶನ, ಮಹಾಪೂಜೆ, ತುಲಾ ಭಾರ ಇತ್ಯಾದಿ, ರಾತ್ರಿ ಸ್ಥಳೀಯ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ.ಬೆಳ್ತಂಗಡಿ ರಾಜಕೇಸರಿ (ರಿ) ಸಹ ಸಂಸ್ಥೆ ಗೋವಿಂದೂರು
ಸಹ ಭಾಗಿತ್ವದಲ್ಲಿ ಪೂಂಜಾಲಕಟ್ಟೆ ನಾಟಕ ಕಲಾವಿದರಿಂದ ಅರ್ಗಂಟ್ ತುಳು ಹಾಸ್ಯ ನಾಟಕ ನಡೆಯಿತು. ಜ.29  ರಂದು ಭಜನಾ ವರ್ಧಂತಿ ರಾತ್ರಿ ರಂಗ ಪೂಜೆ, ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ.ಜ.30  ರಂದು ರಾತ್ರಿ ಸ್ಥಳೀಯ ಕಲಾವಿದರಿಂದ ಡಬಲ್ ಗೇಮ್ ತುಳು ಸಾಮಾಜಿಕ ನಾಟಕ ರಥಬೀದಿಯಲ್ಲಿ ಯಶಸ್ವಿಯಾಗಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.