ಕೆಮ್ಮಟೆ ಶಾಲೆಯಲ್ಲಿ ಗಣರಾಜ್ಯೋತ್ಸವ, ಕಂಪ್ಯೂಟರ್ ಕೊಡುಗೆ ಹಸ್ತಾಂತರ

Advt_NewsUnder_1
Advt_NewsUnder_1

ಪುದುವೆಟ್ಟು: ಇಲ್ಲಿನ ಸರಕಾರಿ ಹಿ. ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಮತ್ತು ಕಂಪ್ಯೂಟರ್ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಜ. 26 ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕ್ಕರ್ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷೆ ಯಶೋಧಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮತ್ತು ಸಮಿತಿ ಸದಸ್ಯರುಗಳು, ವಿದ್ಯಾರ್ಥಿ ಹೆತ್ತವರು, ಪೋಷಕರು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಈ ವೇಳೆ ಶಾಲೆಯ ಬಹುಕಾಲದ ಬೇಡಿಕೆಗಳಲ್ಲೊಂದಾಗಿದ್ದ ಕಂಪ್ಯೂಟರೊಂದನ್ನು ದಾನಿಗಳಾದ ಅಬ್ಬಾಸ್ ಸಿ.ಪಿ ಅವರು ಒದಗಿಸಿದ್ದು ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಸಮಿತಿಗೆ ಹಸ್ತಾಂತರ ನಡೆಸಿದರು.
ಅಲ್ಲದೆ ಮುಂದಿನ ವರ್ಷದ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಭಾಷೆ ಕಲಿಕೆಗೆ ಪೂರಕವಾಗಿ ಪುಸ್ತಕಗಳು ಮತ್ತು 2 ಹೆಚ್ಚುವರಿ ಕಂಪ್ಯೂಟರ್ ನೀಡುವುದಾಗಿ ಅವರು ಭರವಸೆಯನ್ನೂ ನೀಡಿದರು.
ಮುಖ್ಯ ಶಿಕ್ಷಕಿ ಶಿಲ್ಪಾ, ಶಿಕ್ಷಕಿಯರಾದ ಪ್ರೀತಿ, ವಸಂತಿ ಟಿ ನಿಡ್ಲೆ, ನಿರ್ಮಲಾ, ಅಶ್ವಿನಿ, ಅಂಗನವಾಡಿ ಶಿಕ್ಷಕಿ ಶಾಂತಾ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.