ಫೆ. 2: ಉಜಿರೆಯಲ್ಲಿ ರಾಷ್ಟ್ರೀಯ ಹಿಂಜಾವೇ ವತಿಯಿಂದ ರಾಜ್ಯಮಟ್ಟದ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾ| ಸಮಿತಿ ವತಿಯಿಂದ ಫೆ.2 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಮಾದರಿ ಪುರುಷರ ಮ್ಯಾಟ್ ಕಬಡ್ಡಿ ಮುಕ್ತ ಪಂದ್ಯಾಟ ಸೌಜನ್ಯಾ ಟ್ರೋಫಿ, ಸಾಧಕ ಕ್ರೀಡಾಪಟುಗಳಿಗೆ ಮತ್ತು ದೇಶ ಕಾಯುವ ಯೋಧರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಉಜಿರೆ ಚಾರ್ಮಾಡಿ ರಸ್ತೆಯ ಶ್ರೀನಗರ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಹಿಂಜಾವೇ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಾ. ಅಧ್ಯಕ್ಷ ಅನಿಲ್ ಕುಮಾರ್ ಅಂತರ ತಿಳಿಸಿದ್ದಾರೆ.
ಕ್ರೀಡಾಂಗಣದಲ್ಲೇ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪಂದ್ಯಾಟದುದ್ದಕ್ಕೂ ದೇಶಭಕ್ತಿ ಅರಳಿಸುವ ಗೀತೆ ಗಾಯನ ನಡೆಯಲಿದೆ ಎಂದರು.
ಮಹೇಶ್‌ಶೆಟ್ಟಿ ತಿಮರೋಡಿ ಮಾತನಾಡಿ, ರಾಜಕೀಯ ಕ್ಷೇತ್ರ ಕೊಳಕಾಗಿದ್ದು ಆ ವ್ಯವಸ್ಥೆಯಿಂದ ಧರ್ಮಸ್ಥಾಪನೆ ಸಾಧ್ಯವಿಲ್ಲ. ಧರ್ಮಬದ್ಧವಾಗಿ ಪ್ರಖರವಾದ ಹಿಂದೂ ರಾಷ್ಟ್ರ ಕಟ್ಟುವುದು, ಜಾತಿ, ಮತ, ಪಂತ, ಪಂಗಡ ಮೀರಿ ಎಲ್ಲರನ್ನೂ ಒಟ್ಟು ಮಾಡುವ ಉದ್ಧೇಶದಿಂದ ರಾಷ್ಟ್ರೀಯ ಹಿಂಜಾವೇ ಸ್ಥಾಪಿಸಲಾಗಿದೆ. ಸರಕಾರಿ ಕಚೇರಿ, ಸಂವಿಧಾನ, ನ್ಯಾಯಾಂಗ ವ್ಯವಸ್ಥೆ, ಆಡಳಿತ ಯಂತ್ರ ಎಲ್ಲೇ ಹೋದಲೂ ನ್ಯಾಯ ಮರೀಚಿಕೆಯಾಗಿದೆ. ಆದ್ದರಿಂದ ಪರಿವರ್ತಿತ ಸಾಮಾಜಿಕ ಜನಾಂಗವನ್ನು ಎಬ್ಬಿಸಿ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮುಂದಕ್ಕೆ ಇಂತಹದ್ದೇ ಹೋರಾಟಗಳು ಇನ್ನೂ ಶಕ್ತಿಯುತವಾಗಿ ನಡೆಸಲಿದ್ದೇವೆ. ಸಚ್ಚಾರಿತ್ರ್ಯವಾಗಿ ಬದುಕುವ ಜನಾಂಗದ ಮೂಲಕ ಧರ್ಮ ಸ್ಥಾಪನೆಯಾಗಬೇಕು. ಅದಕ್ಕೆ ಪ್ರೇರಣೆಯಾಗಲು ಈ ಕ್ರೀಡಾಕೂಟ ಕೂಡ ಒಂದು ಭಾಗವಾಗಿದೆ ಎಂದರು.
ಸಂಜೆ 7.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ, ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ರಾಕೇಶ್ ಮಲ್ಲಿ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಹಿತ ಹಲವು ಗಣ್ಯರುಗಳು ಭಾಗಿಯಾಗಲಿದ್ದಾರೆ. ಪ್ರೋ ಕಬಡ್ಡಿಯಲ್ಲಿ ಮಿಂಚುತ್ತಿರುವ ಕ್ರೀಡಾಪಟುಗಳು ಕೂಡ ವಿಶೇಷ ಆಕರ್ಷಣೆಗಾಗಿ ಆಗಮಿಸಲಿದ್ದು ಆಯ್ದ ತಂಡಗಳಲ್ಲಿ ಆಟವಾಡಲಿದ್ದಾರೆ.
ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ರವಿಕುಮಾರ್ ಬರಮೇಲು, ಸಂಚಾಲಕ ಮನೋಜ್ ಕುಂಜರ್ಪ, ಕ್ರೀಡಾ ಸಮಿತಿ ಸಂಚಾಲಕ ಮುಖೇಶ್ ಶೆಟ್ಟಿ ಪಾಣ್ಯಾಲ್, ಉಜಿರೆ ಗ್ರಾ. ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಪ್ರ. ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮಂದರ್ಸ ಉಪಸ್ಥಿತರಿದ್ದರು.

ವಿಜೇತ ತಂಡಗಳಿಗೆ ಪ್ರಥಮ 50 ಸಾವಿರ, ದ್ವಿತೀಯ 35 ಸಾವಿರ, ತೃತೀಯ 20 ಸಾವಿರ ಮತ್ತು ಚತುರ್ಥ 10 ಸಾವಿರ ರೂ. ನಗದು ಮತ್ತು ಫಲಕಗಳು ಹಾಗೂ ವೈಯುಕ್ತಿಕ ಪುರಸ್ಕಾರಗಳು ಲಭಿಸಲಿದೆ. ತಿಮರೋಡಿ ಲಯನ್ಸ್ ವಾಟ್ಸ್‌ಆಪ್ ಗ್ರೂಪ್ ಸದಸ್ಯರಿಂದ ರಾತ್ರಿ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಊಟ ಮತ್ತು ಚಹಾತಿಂಡಿ ವ್ಯವಸ್ಥೆ ಮಾಡಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.