ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಮೂರು ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್ ಸಾಮ್ನಯ ಸಭೆಯು ಜ. 26 ರಂದು ಅಧ್ಯಕ್ಷ ಡಾ. ಪ್ರಮೋದ್ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿತು.
ಗಣರಾಜ್ಯೋತ್ಸವ ಆಚರಣೆ ಬಗ್ಗೆ ಸೀನಿಯರ್ ಸದಸ್ಯ ಜಾನ್ ಅರ್ವಿನ್ ಡಿಸೋಜಾ ಮಾತನಾಡಿದರು.
ಈ ಸಂದರ್ಭ ದೇಶ ಕಾಯುವ ಕೆಲಸ ನಿರ್ವಹಿಸಿದ ನಿವೃತ ಯೋಧ, ಸೀನಿಯರ್ ಛೇಂಬರ್ ಸದಸ್ಯ ದಯಾನಂದ ಇವರನ್ನು ಸನ್ಮಾನಿಸಲಾಯಿತು.
ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಸಂಘದ ಸದಸ್ಯ ಡಿ ಜಗದೀಶ್, ಮತ್ತು ಜಯಾನಂದ ಇವರನ್ನೂ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಸನ್ಮಾನಿತರ ಪರವಾಗಿ ಜಗದೀಶ್ ಮತ್ತು ಜಯಾನಂದ ಮಾತನಾಡಿ, ಜೇಸಿ ಸಂಘಟನೆಯಿಂದ ತಮಗೆ ಆಗಿರುವ ಪ್ರಯೋಜನ, ಈ ಮಟ್ಟಕ್ಕೆ ಬೆಳೆದುಬಂದ ರೀತಿ, ವೃತ್ತಿ ಅನುಭವ ಹಂಚಿಕೊಂಡರು. ಈ ಸಂದರ್ಭ ನೂತನ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು.
ಮಾ. 1 -2 ರಂದು ತ್ರಿಶ್ಯೂರ್‌ನಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಬಗ್ಗೆ ಸಭೆಗೆ ತಿಳಿಸಿದರು. ಸದಸ್ಯ ಪುಷ್ಪರಾಜ್ ಶೆಟ್ಟಿ, ಬಾನು ಪ್ರಸನ್ನ ಮತ್ತು ವಿಶ್ವನಾಥ ಲಾಲ ಇವರ ವತಿಯಿಂದ ಔತಣಕೂಟ ಏರ್ಪಡಿಸಲಾಗಿತ್ತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.