ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ದೈವಾಧೀನ

ಬೆಳ್ತಂಗಡಿ: ದಕ್ಷಿಣ ಕನ್ನಡದ ಮಣ್ಣಿನ ಮಗ, ಮಾಜಿ ರಕ್ಷಣಾ ಹಾಗೂ ರೈಲ್ವೇ ಸಚಿವ, ಜಾರ್ಜ್ ಫೆರ್ನಾಂಡಿಸ್(88.ವ) ರವರು ಜ.29ರಂದು ದೆಹಲಿಯಲ್ಲಿ ನಿಧನರಾದರು. ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೂಲತಃ ಮಂಗಳೂರಿನವರಾದ ಜಾರ್ಜ್ ಫೆರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು.
ಜನತಾ ದಳದಲ್ಲಿದ್ದ ಇವರು ನಂತರ ತಮ್ಮದೇ ಸಮತಾ ಪಕ್ಷ ಆರಂಭಿಸಿದ್ದರು. ಬಿಹಾರದಿಂದ ರಾಜ್ಯಸಭೆಗೆ ಪ್ರತಿನಿಧಿಸುತ್ತಿದ್ದ ಇವರು ವಾಜಪೇಯಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿ, ವಿ.ವಿ.ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದರು.
ಕೊಂಕಣ ರೈಲ್ವೇ ಹರಿಕಾರ: ಕೇಂದ್ರ ರೈಲ್ವೇ ಸಚಿವರಾಗಿದ್ದ ಸಮಯದಲ್ಲಿ ಜಾರ್ಜ್ ಫೆರ್ನಾಂಡಿಸ್ ರವರು ಮಂಗಳೂರಿನ ತೊಕ್ಕೊಟ್ಟುವಿನಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ರೈಲ್ವೇ ಮಾರ್ಗ ನಿರ್ಮಾಣ ಮಾಡಿದ್ದರು. ಇದರಿಂದ ಮಂಗಳೂರು- ಮುಂಬೈ ನಡುವಿನ ಸಂಪರ್ಕ ಸುಲಭವಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.