ಜಗನ್ನಾಥ ಬಂಗೇರ ಹೇರಾಜೆ ಸ್ಮರಣಾರ್ಥ ಕಬಡ್ಡಿ ಅಸೋಸಿಯೇಶನ್‌ನಿಂದ ಚಾಂಪ್ಯನ್‌ಶಿಪ್ ಪಂದ್ಯಾಟ

ಬೆಳ್ತಂಗಡಿ : ಗ್ರಾಮೀಣ ಕಬಡ್ಡಿ ಕ್ರೀಡಾ ಕ್ಷೇತ್ರದಲ್ಲಿ ಈಗ ಅಭೂತಪೂರ್ವ ಬದಲಾವಣೆಯ ಪರ್ವವಾಗಿದ್ದು ಮ್ಯಾಟ್ ಕಬಡ್ಡಿ, ಪ್ರೋ ಮಾದರಿ ಕಬಡ್ಡಿಗಳು ಜಳ್ತಂನಪ್ರತಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಲಭ್ಯವಾಗುವಂತೆ ಮತ್ತು ಗ್ರಾಮಾಂತರ ಭಾಗದ ಕ್ರೀಡಾಪಟುಗಳಿಗೆ ಪ್ರಯೋಜವಾಗುವಂತೆ ಮ್ಯಾಟ್ ಖರೀದಿಗೆ ವಿಧಾನ ಪರಿಷತ್ ನಿಧಿಯಿಂದ ಅನುದಾನ ಒದಗಿಸಿಕೊಡುತ್ತೇನೆ ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು.

ತಾ| ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಜ. 27  ರಂದು ನಡೆದ ದಿ. ಜಗನ್ನಾಥ ಬಂಗೇರ ಹೇರಾಜೆ ಸ್ಮಾರಕ ಕಪ್ ಕಬಡ್ಡಿ ಪಂದ್ಯಾಟದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಷ್ಟ್ರೀಯ ಕಬಡ್ಡಿ ಆಟಗಾರರೂ ಆಗಿದ್ದ ಜಗನ್ನಾಥ ಹೇರಾಜೆ ಅವರು ಸಾಮಾಜಿಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ತನ್ನನ್ನು ತೊಡಿಸಿಕೊಂಡವರಾಗಿದ್ದರು. ಇಂದು ಈ ಪಂದ್ಯಾಕೂಟ ಆಯೋಜಿಸುವ ಮೂಲಕ ಅಸೋಸಿಯೇಶನ್ ಅವರ ಸ್ಮರಣೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾ| ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಂಜನ್ ಜಿ ಗೌಡ ವಹಿಸಿದ್ದರು. ಕ್ರೀಡಾಕೂಟ ಆರಂಭಕ್ಕೂ ಮುನ್ನ ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ರಾಕೇಶ್ ಮಲ್ಲಿ ಭೇಟಿ ನೀಡಿದರು.
ಉದ್ಘಾಟನೆ ನೆರವೇರಿಸಿದ ಮಾಜಿ ಶಾಸಕ ಪ್ರಭಾಕರ ಬಂಗೇರ, ತಾ| ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾಜಿ ಶಾಸಕ ವಸಂತ ಬಂಗೇರ ಶುಭ ಕೋರಿದರು.
ಸಮಾರಂಭದಲ್ಲಿ ಜಿ.ಪಂ ಸದಸ್ಯೆ ಕೆ ಕೊರಗಪ್ಪ ನಾಯ್ಕ, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ ಸದಸ್ಯರಾದ ವಿಜಯ ಗೌಡ ಮತ್ತು ಕೇಶವತಿ, ನ.ಪಂ ಸದಸ್ಯೆ ರಾಜಶ್ರೀ ರಮಣ್, ಜಗನ್ನಾಥ ಹೇರಾಜೆ ಪುತ್ರರಾದ ತಾರುಷ್ ಮತ್ತು ತಾಮಿಶ್, ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಪಿ, ಮಾಜಿ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಜಿಲ್ಲಾ ಕಬಟ್ಟಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಕೃಷ್ಣಾನಂದ ರಾವ್ ಮುಂಡಾಜೆ, ತಾ. ಅಧ್ಯಕ್ಷ ಜಯರಾಜ್ ಜೈನ್, ಪಿಡಬ್ಲ್ಯುಡಿ ಗುತ್ತಿಗೆದಾರ ಅಜಯ್ ಎ.ಜೆ, ಅಬ್ದುಲ್ ರಹಿಮಾನ್ ಪಡ್ಪು, ನಿವೃತ ಎಸ್. ಪಿ ಪೀತಾಂಬರ ಹೇರಾಜೆ, ಜಯರಾಮ ಬಂಗೇರ ಹೇರಾಜೆ, ಶೇಖರ ಬಂಗೇರ ಹೇರಾಜೆ, ಮುಖಂಡರುಗಳಾದ ಅಶೋಕ್ ಗೋವಿಯಸ್, ಪುರುಷೋತ್ತಮ ಪೂಜಾರಿ ಮಂಗಳೂರು, ಅಭಿನಂದನ್ ಹರೀಶ್ ಕುಮಾರ್, ರವಿ ಬಿ.ಎಸ್, ವಿಜಯ ಫೆರ್ನಾಂಡಿಸ್, ಕಿರಣ್ ಮತ್ತು ಕಿಶೋರ್, ಮಧುಕರ ಸುವರ್ಣ, ಗಿರೀಶ್ ಡೋಂಗ್ರೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಯುವ ಸಬಲೀಕರಭ ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಂಗಣವನ್ನು ಎಂ.ಎಲ್.ಸಿ ಹರೀಶ್ ಕುಮಾರ್ ಮತ್ತು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ರಾಜಶೇಖರ ಶೆಟ್ಟಿ ಮಡಂತ್ಯಾರು ಸ್ವಾಗತಿಸಿದರು. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಫ್ರಾನ್ಸಿಸ್ ವಿ.ವಿ ನಿರೂಪಿಸಿದರು.
ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ವಂದಿಸಿದರು. ವಿಜಯ್ ಅತ್ತಾಜೆ ವೀಕ್ಷಕ ವಿವರಣೆ ನೀಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.