HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಈಜುಕೊಳದಲ್ಲಿ ತರಬೇತುದಾರರ ಸದಸ್ಯರಿಗಾಗಿ ಈಜು ಸ್ಪರ್ಧೆ

ಉಜಿರೆ: ಇಲ್ಲಿನ ಶ್ರೀ ಧ. ಮ ಕಾಲೇಜು ಈಜುಕೊಳದಲ್ಲಿ ಇದರ ತರಬೇತಿ ಪಡೆಯುತ್ತಿರುವ ಸದಸ್ಯರಿಗಾಗಿ ವಿವಿಧ ವಿಭಾಗಗಳಲ್ಲಿ ಈಜು ಸ್ಪರ್ಧೆಯನ್ನು ಜ. 27 ರಂದು ಏರ್ಪಡಿಸಲಾಗಿತ್ತು.
ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಈಜು ಸ್ಪರ್ಧೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಈಜುಕೊಳದ ಸಮಿತಿ ಗೌರವಾಧ್ಯಕ್ಷ ಡಾ. ಜಗನ್ನಾಥ, ಅಧ್ಯಕ್ಷ ನರಸಿಂಹ ನಾಯಕ್, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಕೋಶಾಧಿಕಾರಿ ಕರುಣಾಕರ ನಾಯಕ್, ಸಾರ್ವಜನಿಕ ಸಂಪರ್ಕಾಧಿಕಾರಿ ವೆಂಕಟೇಶ್ ಪೈ, ಎಸ್‌ಡಿಎಂ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು. ಬಿಎನ್‌ವೈಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇಂದ್ರ ನಿರೂಪಿಸಿ ವೀಕ್ಷಕ ವಿವರಣೆ ನೀಡಿದರು.
ಮುಖ್ಯ ತೀರ್ಪುಗಾರರಾಗಿ ಖ್ಯಾತ ಈಜು ತರಬೇತುದಾರ ರಾಮಕೃಷ್ಣ ಭಟ್ ಮಂಗಳೂರು, ಸಹ ತರಬೇತುದಾರರಾದ ಶೀನ ಮತ್ತು ಚರಣ್ ಗೌಡ ಸಹಕರಿಸಿದರು. ಈಜುಕೊಳದ ಎಲ್ಲಾ ಸದಸ್ಯರುಗಳು ನೀಲಿ ಜೆರ್ಸಿ ತೊಟ್ಟು ಪಥ ಸಂಚಲನದಲ್ಲಿ ಭಾಗಿಯಾಗಿ ಸಂಘಟನೆ ತೋರ್ಪಡಿಸಿದರು.
ಉದ್ಘಾಟನೆ ಪ್ರಯುಕ್ತ ಯಾವುದೇ ಸಭಾ ಕಾರ್ಯಕ್ರಮ ನಡೆಸದೆ ಕೇವಲ ರಿಬ್ಬನ್ ಕತ್ತರಿಸುವ ಮೂಲಕ ನೇರವಾಗಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿತ್ತು.
ವಿವಿಧ ವಿಭಾಗಗಳಲ್ಲಿ ಮತ್ತು ಪ್ರಾಯಮಿತಿಯಲ್ಲಿ ವಿದ್ಯಾರ್ಥಿಗಳು, ಈಜುಕೊಳದ ಸದಸ್ಯರಾಗಿರುವ ಸಾರ್ವಜನಿಕರಿಗಾಗಿ 50  ಮೀಟರ್‌ನಿಂದ ಆರಂಭವಾಗಿ 400  ಮೀಟರ್ ವರೆಗಿನ ಸ್ಪರ್ಧೆಗಳು ನಡೆದವು. ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರದೊಂದಿಗೆ ಪುರಸ್ಕರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.