ತಾಲೂಕಿನ ಅಲ್ಲಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಪೆರಾಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ಪೆರಾಡಿ ವತಿಯಿಂದ  ಮಸೀದಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಪ್ರಜಾಪ್ರಭುತ್ವ ದೇಶವು ದುರುಳತೆಯುಳ್ಳ ,ಅನೈತಿಕತೆಯುಳ್ಳ ಕೆಲ ಅನಾಗರಿಕರಿಂದ ತುಂಬಿಹೋಗಿದೆ. ಆದರೆ ಖಂಡಿತವಾಗಿಯೂ ಈ ದೇಶದ ಮುಂದಿನ ನೈತಿಕತೆಯುಳ್ಳ ಮತ್ತು ನಾಗರಿಕತ್ವವುಳ್ಳ ಜನಾಂಗ ನಿಮ್ಮಂತಹ ಪುಟಾಣಿ ಮಕ್ಕಳಾಗಿರುತ್ತದೆ.ಆದ್ದರಿಂದ ದೇಶದ ಹಿತವನ್ನು ಕಾಪಾಡುವುದರ ಮುಖಾಂತರ ಅನಾಗರಿಕತೆಯನ್ನು, ಅರಾಜಕತೆಯನ್ನು ಹೋಗಲಾಡಿಸಬೇಕಾಗಿದೆ. ಎಂದು ಮಸೀದಿ ಖತೀಬರಾದ ಹಾರೀಸ್ ಹನೀಫಿ ಉಸ್ತಾದರು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ರಾದ ಮುತ್ತಲಿಬ್ ಮದನಿ ಉಸ್ತಾದರು ,ಖುವ್ವತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಉಜಿರೆ ಮಲ್‌ಜ‌ಅ್‌ ದಅ್‌ವಾ ಸೆಂಟರ್ ವತಿಯಿಂದ  ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ  ಧ್ವಜಾರೋಹಣ   ನೆರವೇರಿತು .ಕಾರ್ಯಕ್ರಮದಲ್ಲಿ ಉಜಿರೆ ಮಲ್‌ಜ‌ಅ್‌ ಸಂಸ್ಥೆಯ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ, ಸಂಸ್ಥೆಯ ಮುದರ್ರಿಸ್ ಆಸಿಫ್ ಅಹ್ಸನಿ ದುಆ ನಡೆಸಿದರು. ಸಂಸ್ಥೆಯ ಆರ್ಗನೈಸರ್ ಅಬ್ದುಲ್ ಹಕೀಂ ಮದನಿ ಮಾಚಾರ್, ಹಿತೈಷಿಗಳಾದ ಮೂಸಕುಂಞಿ ಕಕ್ಕೆಜಾಲು,ಇಸ್ಮಾಯಿಲ್ ಹಾಜಿ ಕಾಶಿಬೆಟ್ಟು, ಉಮರುಲ್ ಫಾರೂಖ್ ಕಾಶಿಬೆಟ್ಟು,ಹಾರಿಸ್ ಏಟುಝಡ್, ಅಬ್ದುಲ್ಲತೀಫ್ ಮುಗುಳಿ,ಮುಹಮ್ಮದ್ ಶಾಖಿರ್ ಟಿ.ಬಿ ಕ್ರೋಸ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಪಿ.ಆರ್.ಒ ಮುಹಮ್ಮದ್ ಶರೀಫ್ ಬೆರ್ಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.