HomePage_Banner_
HomePage_Banner_

ಅರಸಿನಮಕ್ಕಿ: ನಕಲಿ ಚಿನ್ನವಿರಿಸಿದ ಆರೋಪ; ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ

ಮುಖ್ಯ ಆರೋಪಿ ಮನ್ಮಥ ಆಚಾರಿ

ಅರಸಿನಮಕ್ಕಿ: ಇಲ್ಲಿಯ  ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸರಾಫನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ನಿವಾಸಿ ಮನ್ಮಥ ಆಚಾರಿ ಸದ್ರಿ ಬ್ಯಾಂಕಿಗೆ ಸುಮಾರು 57  ಮಂದಿಯ ಮೂಲಕ ನಕಲಿ ಚಿನ್ನವನ್ನ ನೀಡಿ ಅಡವಿರಿಸಿ ಬ್ಯಾಂಕಿನಿಂದ 38.71 ಲಕ್ಷ ರೂ . ಸಾಲ ಪಡೆದು ಬ್ಯಾಂಕಿಗೆ ವಂಚಿಸಿದ ಪ್ರಕರಣವು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಖ್ಯ ಆರೋಪಿ ಮನ್ಮಥ ಆಚಾರಿಯವರನ್ನು ಪೊಲೀಸರು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ನಕಲಿ ಚಿನ್ನವನ್ನು  ಅಡವಿರಿಸಿ ಪಡೆದ ಸಾಲವನ್ನು ಮನ್ಮಥ ಆಚಾರಿ ಅವರಿಗೆ ನೀಡಿದ ಆಪಾದನೆಯ ಹಿನ್ನೆಲೆಯಲ್ಲಿ ಒಟ್ಟು 57 ಮಂದಿಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬ್ಯಾಂಕಿಗೆ ಬರುವ ತನ್ನ ಪರಿಚಯದವರ ಸುಮಾರು 57 ಮಂದಿಯ ಮೂಲಕ ನಕಲಿ ಚಿನ್ನವನ್ನು ಸದ್ರಿ ಬ್ಯಾಂಕಿನಲ್ಲಿ ಅಡವಿರಿಸಿ ಸಾಲ ಪಡೆಯಲು ವಿನಂತಿಸಿಕೊಂಡು ಈ ವಂಚನೆಯನ್ನು ಎಸಗಿರುವುದಾಗಿದ್ದು, ಸರಾಫನ ಮಾತು ನಂಬಿ ಉಪಕಾರ ಮಾಡಲು ಮುಂದಾದ ಸುಮಾರು 57 ಮಂದಿಯೂ ಈ ವಂಚನಾ ಪ್ರಕರಣದಲ್ಲಿ ಸಿಲುಕಿಕೊಂಡಂತಾಗಿದೆ. ಸರಾಫ ನೀಡಿದ ನಕಲಿ ಚಿನ್ನದ ಅಸಲಿಯತ್ತನ್ನು ಅರಿಯದೇ ಬ್ಯಾಂಕಿನಲ್ಲಿ ಅಡವಿರಿಸಿ ಹಣವನ್ನು ಈತನಿಗೇ ನೀಡಿದ್ದ ಕಾರಣದಿಂದ ಉಳಿದ ಮಂದಿಯೂ ತಮ್ಮ ಮೇಲೆ ಬ್ಯಾಂಕಿಗೆ ವಂಚನೆಗೈದ ಕೇಸನ್ನು ಹಾಕಿಸಿಕೊಂಡಂತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.