ವಾಮದಪದವು – ಉದ್ಯೋಗ ಕೌಶಲ್ಯ ಮಾರ್ಗದರ್ಶನ ಕಾರ್ಯಕ್ರಮ

ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಕೋಶ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಇವುಗಳ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವಿನಲ್ಲಿ ಉದ್ಯೋಗ ಕೌಶಲ್ಯ ಮತ್ತು ವೃತ್ತಿ ಮಾರ್ಗದರ್ಶನ ಕುರಿತ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಬದಲಾಗುತ್ತಿರುವ ಉದ್ಯೋಗದ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ಬೆಳೆಸಿಕೊಳ್ಳುವ ಅನಿವಾರ್‍ಯತೆಯಿದ್ದು, ಸಾಮಾನ್ಯ ಜ್ಞಾನ, ಸಂಹವನ ಕೌಶಲ್ಯ ಇವುಗಳನ್ನು ವೃದ್ಧಿಸುವ ಬಗೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ರೀತಿ, ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಸಂದರ್ಶನ ಎದುರಿಸುವಿಕೆ ಈ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.

ವರ್ಕ್‌ಫೋರ್ಸ್ ಡೆವಲಪ್‌ಮೆಂಟ್ ಸೆಂಟರ್, ಅವೇಕ್ ಇಂಡಿಯಾ ಫೌಂಡೇಷನ್ – ಬೆಂಗಳೂರು ಇದರ  ಗುರುರಾಜ್. ಎಂ. P.,  ನಿತಿನ್ ಮಿರಾಜ್‌ಕರ್ ಹಾಗೂ  ಅಜ್ಗರ್ ಪಾಷ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ| ಹರಿಪ್ರಸಾದ್. ಬಿ. ಶೆಟ್ಟಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಕಠೋರ ಸತ್ಯಾಸತ್ಯತೆಗಳನ್ನು ವಿಶ್ಲೇಷಿಸಿದರು. ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಾಗೂ ಬೋಧಕ ವೃಂದದವರು ಸಕ್ರಿಯವಾಗಿ ಪಾಲ್ಗೊಂಡರು. ಪ್ರೊ. ಚಂದ್ರಕಾಂತ ಶೆಣೈ ರವರು ಸ್ವಾಗತಿಸಿ, ಡಾ. ರವಿ. ಎಂ. ಎನ್ ರವರು ವಂದಿಸಿ, ಪ್ರೊ. ಅಶೋಕ ಕುಮಾರ. ಬಿ ರವರು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.