ಕೊಲ್ಲಿ ಅಂಗನವಾಡಿ ಕಾರ್ಯಕರ್ತೆ ಕರ್ತವ್ಯಕ್ಕೆ ಹಾಜರಾಗಿರುವುದದನ್ನು ಖಂಡಿಸಿ ಪೋಷಕರು ಮಕ್ಕಳಿಂದ ಮತ್ತೆ ಪ್ರತಿಭಟನೆ

ಮಿತ್ತಬಾಗಿಲು: ಇಲ್ಲಿನ ಕೊಲ್ಲಿ ಅಂಗನವಾಡಿ ಕೇಂದ್ರದ ತಾಯಂದಿರು ಮತ್ತು ಮಕ್ಕಳ ವಿರೋಧದ ನಡುವೆಯೂ ಮೂರನೇ ಬಾರಿಗೆ ಪೊಲೀಸ್ ರಕ್ಷಣೆಯೊಂದಿ ಕೆಲಸಕ್ಕೆ ಹಾಜರಾದ ಕಾರ್ಯಕರ್ತೆ ವಿಜಯಲಕ್ಷ್ಮಿ ಅವರ ಆಗಮನವನ್ನು ಖಂಡಿಸಿ ಮಕ್ಕಳು ಮತ್ತು ಪೋಷಕರು ತರಗತಿ ಬಹಿಷ್ಕರಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ ವಿದ್ಯಮಾನ ನಡೆದಿದೆ.
ಅಂಗನವಾಡಿ ಮಕ್ಕಳಿಗೆ ಸರಿಯಾಗಿ ಪೌಷ್ಠಿಕ ಆಹಾರ ನೀಡದಿರುವ ಬಗ್ಗೆ ಮತ್ತು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಸದ್ರಿ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಮಂಗಳೂರು ಎ.ಸಿ.ಬಿ ಕಛೇರಿಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಈ ಮಧ್ಯೆ ಅವರು ಕೇಂದ್ರಕ್ಕೆ ಏಕಾಏಕಿ ಕರ್ತವ್ಯ ನಿರ್ವಹಣೆಗೆ ಬಂದಾಗ ಅವರ ಆಗಮನವನ್ನು ಊರವರು ತೀವ್ರವಾಗಿ ವಿರೋಧಿಸಿದರು.
ಸದ್ರಿ ಕಾರ್ಯಕರ್ತೆಯನ್ನು ಈ ಕೇಂದ್ರದಿಂದ ವಜಾ ಅಥವಾ ವರ್ಗಾವಣೆ ಮಾಡುವವರೆಗೂ ಅಂಗನವಾಡಿ ಕೇಂದ್ರಕ್ಕೆ ಸಂಬಂದಪಟ್ಟ ತಾಯಂದಿರು ಮತ್ತು ಮಕ್ಕಳು ಉಪವಾಸ ಸತ್ಯಾಗ್ರಹ ಕೈ ಬಿಡದಿರುವ ಕುರಿತು ಎಚ್ಚರಿಕೆಯನ್ನೂ ನೀಡಿದರು. ಸ್ಥಳದಲ್ಲಿ ಬಿಗುವಿನ ವಾರಾವಣವಿದ್ದು ಅಂಗನವಾಡಿ ಕೇಂದ್ರದಲ್ಲಿ ವೃತ್ತ ನಿರೀಕ್ಷಕ ಸಂದೇಶ್ ಇವರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಈ ಕಾರ್ಯಕರ್ತೆ ಆಗಮಿಸುತ್ತಿದ್ದಂತೆ ಎಲ್ಲಾ ಮಕ್ಕಳ ತಾಯಂದಿರು ಮಕ್ಕಳನ್ನು ಅಂಗನವಾಡಿ ಕೇಂದ್ರದಿಂದ ಹೊರಗೆ ಕರೆದುಕೊಂಡು ಬಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಹಿಂದೆ ಎರಡು ಬಾರಿ ಇದೇ ರೀತಿ ಘಟನೆ ನಡೆದಿದ್ದು, ಈ ಬಗ್ಗೆ ಗ್ರಾ.ಪಂ ನಲ್ಲೂ ಕೂಡ ನಿರ್ಣಯ ಕೈಗೊಂಡು, ಮುಂದಕ್ಕೆ ಮತ್ತೆ ಇದೇ ಕಾರ್ಯಕರ್ತೆಯನ್ನು ಕೆಲಸಕ್ಕೆ ನಿಯೋಜಿಸುವ ವೇಳೆ ಸಂಭವಿಸಬಹುದಾದ ಸಂಘರ್ಷಕ್ಕೆ ಅವಕಾಶವಾಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಸಿಡಿಪಿಒ ಇಲಾಖೆಗೆ ನೀಡಲಾಗಿದ್ದರೂ ಇದೀಗ ಮೇಲಿನಿಂದ ಒತ್ತಡ ಮತ್ತು ಪ್ರಭಾವ ಬಳಿಸಿ ಕಾರ್ಯಕರ್ತೆ ಕರ್ತವ್ಯಕ್ಕೆ ಆಗಮಿಸಿದಾಗ ಅವರ ಆಗಮನವನ್ನು ಮಕ್ಕಳ ಪೋಷಕರು ತೀವ್ರವಾಗಿ ವಿರೋಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.