ಉಜಿರೆಯಲ್ಲಿ ಕಾಶಿ ಪ್ಯಾಲೇಸ್ ಶಿಲಾನ್ಯಾಸ

ಬೆಳ್ತಂಗಡಿ: ಶೈಕ್ಷಣಿಕ ನಗರಿ ಎಂದೇ ಹೆಸರಾಗಿರುವ ಉಜಿರೆ ಇಲ್ಲಿನ ಕಾಲೇಜು ರಸ್ತೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿರುವ ಕಾಶಿ ಪ್ಯಾಲೇಸ್ ಕಟ್ಟಡಕ್ಕೆ ಜ.23 ರಂದು ಶಿಲಾನ್ಯಾಸ ನೆರವೇರಿತು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ| ಎಸ್.ಪ್ರಭಾಕರ್ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಮತ್ತು ಸೋನಿಯಾ ಯಶೋವರ್ಮ ಇವರ ಉಪಸ್ಥಿತಿಯಲ್ಲಿ ಗುರುವಾಯನಕೆರೆ ನವಶಕ್ತಿಯ ಶ್ರೀಮತಿ ಕಾಶಿ ಶೆಟ್ಟಿಯವರು ಶಿಲಾನ್ಯಾಸಗೈದರು. ಬರೋಡದ ಉದ್ಯಮಿ, ಶಶಿ ಕ್ಯಾಟರಿಂಗ್ ಸಂಸ್ಥೆ ಹಾಗೂ ಕಾಶಿ ಪ್ಯಾಲೇಸ್‌ನ ಮಾಲಕ ಶಶಿಧರ ಶೆಟ್ಟಿ ಮತ್ತು ಸಹೋದರರು ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು.
ಉಜಿರೆಯಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸುಸಜ್ಜಿತವಾದ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಕಾಶಿ ಪ್ಯಾಲೇಸ್ ಉಜಿರೆಯಲ್ಲಿ ನಿರ್ಮಾಣ ಆಗಲಿದೆ ಎಂದು ಮಾಲಕರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.