HomePage_Banner_
HomePage_Banner_
HomePage_Banner_

ದೆಹಲಿ ಗಣರಾಜ್ಯೋತ್ಸವ ಪೆರೇಡ್ ಬುಡಕಟ್ಟು ಜನಾಂಗದ ವಸಂತಿಯವರಿಗೆ ಅವಕಾಶ

ಬೆಳ್ತಂಗಡಿ: ದೆಹಲಿ ಕೆಂಪುಕೋಟೆಯಲ್ಲಿ ಜ. 26 ರಂದು ನಡೆಯುವ ದೇಶದ ಪರಮೋಚ್ಚ ಕಾರ್ಯಕ್ರಮ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬುಡಕಟ್ಟು ಸಮುದಾಯದ ಪ್ರತಿನಿಧಿಯಾಗಿ ಭಾಗವಹಿಸಲು ಮತ್ತು ರಾಷ್ಟ್ರಪತಿ, ಪ್ರಧಾನಿ ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲು ರಾಜ್ಯ ಮಲೆಕುಡಿಯ ಸಂಘದ ಗೌರವ ಸಲಹೆಗಾರ ರಾಗಿರುವ ಸಾಮಾಜಿಕ ಕಾರ್ಯಕರ್ತೆ ವಸಂತಿ ನೆಲ್ಲಿಕಾರು ಕುತ್ಲೂರು ಇವರನ್ನು ಆಯ್ಕೆಗೊಳಿಸಿ ಭಾರತ ಸರಕಾರದ ಬುಡಕಟ್ಟು
ಸಚಿವಾಲಯ ಆದೇಶ ನೀಡಿದೆ. ಆ ಹಿನ್ನೆಲೆಯಲ್ಲಿ ಅವರು ಜ.21 ರಂದೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಯಾ ಗಿದ್ದ ಅವರು ಪ್ರಸ್ತುತ ನೆಲ್ಲಿಕ್ಕಾರಿನಲ್ಲಿ ನೆಲೆಸಿದ್ದಾರೆ. ಅರಣ್ಯ ಹಕ್ಕು ಸಮಿತಿ ನಾರಾವಿ, ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಇದರಲ್ಲಿ ಸೇವೆ ಸಲ್ಲಿಸಿ ಅರಣ್ಯಮೂಲ ಬುಡಕಟ್ಟು ಸಂಘಟನೆ, ರಾಷ್ಟ್ರೀಯ ಕಾನೂನು ಶಾಲೆಯ ಕಾರ್ಯಕ್ರಮಗಳಲ್ಲಿ ತೊಡಗಿ ಕೊಂಡು ಸಮುದಾಯದ ಯುವತಿಯರ ಸ್ವಾವಲಂಬನೆಗೆ ಕೇಂದ್ರೀಯ ಸ್ವ ಉದ್ಯೋಗ ಯೋಜನೆ ಮೂಲಕ ಕುತ್ಲೂರಿನ ಅನೇಕರಿಗೆ ನೇಯ್ಗೆ ತರಬೇತಿ ನೀಡಿ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಹೋರಾಟಗಳಲ್ಲಿ ಸಮುದಾಯದ ಬಗ್ಗೆ ಕಾಳಜಿವಹಿಸಿ, ಜನಪ್ರತಿನಿಧಿಗಳು ಅಧಿಕಾರಿಗಳು, ವಿವಿಧ ಕಾನೂನಾತ್ಮಕ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿದ್ದು ಸಮುದಾಯಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಈ ಸೇವೆಗಳನ್ನು ಗುರುತಿಸಿ ಮೈಸೂರಿನ ಬುಡಕಟ್ಟು ಜನಾಂಗಗಳ ಸಂಶೋಧನಾ ಸಂಸ್ಥೆಯ ಮೂಲಕ ಅವರನ್ನು ಈ ಅವಕಾಶಕ್ಕೆ ಶಿಫಾರಸ್ಸುಗೊಳಿಸಿದ್ದು, ಇದೀಗ ಭಾರತ ಸರಕಾರದ ಬುಡಕಟ್ಟು ಸಚಿವಾಲಯದಿಂದ ಅವರಿಗೆ ಅಧಿಕೃತ ಅವಕಾಶ ಲಭಿಸಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.