ಝೇಂಕಾರ”ದಲ್ಲಿ ಹಳೆಸ್ಕೂಟರ್, ಹಳೆಬಣ್ಣ.

ಉಜಿರೆ: ವಿವಿಧ ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವೇದಿಕೆ ಮೇಲೆ ನಿಲ್ಲಿಸಿದ ಸ್ಕೂಟರ್ ನೋಡಿ ಆಶ್ಚರ್ಯ. ಅದರ ನಿಜ ಅರ್ಥವನ್ನು ತಿಳಿಯುವ ಕುತೂಹಲ.
ಇದು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಂಡು ಬಂದ ದೃಶ್ಯ.
ಪ್ರತೀ ವರ್ಷದಂತೆ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2019 ರ ಝೇಂಕಾರ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್‍ಯಕ್ರಮ ಆಯೋಜಿಸಲಾಗಿದ್ದು ಈ ಕಾರ್‍ಯಕ್ರಮದ ಒಟ್ಟಾರೆ ಥೀಮ್ ರೇಟ್ರೋಗೆ ಸಂಬಂಧಿಸಿದ್ದು. ಅದಕ್ಕೆ ಸರಿ ಹೊಂದುವಂತೆ ವೇದಿಕೆಯನ್ನು ಹಾಗೂ ಸಂಪೂರ್ಣ ಕಾರ್‍ಯಕ್ರಮವನ್ನು ಅಲಂಕರಿಸಲಾಗಿದ್ದು ನೋಡಲು ಆಕರ್ಷಣೀಯವಾಗಿತ್ತು.
ಈ ಥೀಮ್‌ಲ್ಲಿ ಪ್ರಮುಖ ಆಕರ್ಷಣೆ ಆಗಿದ್ದು ಎರಡು ಹಳೆಯ ಕಾಲದ ಚೇತಕ್ ಸ್ಕೂಟರ್‌ಗಳು. ಈ ಸ್ಕೂಟರ್‌ಗಳನ್ನು ವೇದಿಕೆಯ ಎರಡು ಬದಿಗಳಲ್ಲಿ ಇರಿಸಲಾಗಿದೆ. ಈ ಸ್ಕೂಟರ್‌ಗಳು ಕಾರ್‍ಯಕ್ರಮಕ್ಕೆ ಆಗಮಿಸಿದ ಎಲ್ಲರ ಗಮನ ಸೆಳೆದವು.
ಮತ್ತೆ ವಿಶೇಷವಾಗಿ ಬಿಳಿ ಮತ್ತು ನೀಲಿ ಬಣ್ಣದ ಚೇತಕ್ ಸ್ಕೂಟರ್ ಧರ್ಮಸ್ಥಳದ ಅಭಿದೇವ್ ಅರಿಗ ಅವರಿಗೆ ಸೇರಿದ್ದು. ಇದು ೬೦ ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಹೀಗೆ ಎಸ್.ಡಿ.ಎಂ ಝೇಂಕಾರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಕ್ಕೆ ಈ ಸ್ಕೂಟರ್‌ಗಳು ಸಾಕ್ಷಿಯಾದವು.ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಈ ಹಳೆ ಸ್ಕೂಟರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮರೆಯಲಿಲ್ಲ..!

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.