ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ಗೋಲ್ಡ್ ಫೆಸ್ಟಿವಲ್- 2019 ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಇಲ್ಲಿಯ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಶ್ರೀ ಧನಲಕ್ಷ್ಮೀ  ಜ್ಯುವೆಲ್ಲ್‌ರ್‍ಸ್ ಪ್ರತಿ ವರ್ಷದಂತೆ ಆಯೋಜಿಸುತ್ತಿರುವ ಗೋಲ್ಡ್ ಫೆಸ್ಟಿವಲ್ 2019  ಜ.21 ರಂದು ಶುಭಾರಂಭಗೊಂಡಿತು.
ಉಜಿರೆ ಸಂಧ್ಯಾ ಟ್ರೇಡರ್‍ಸ್‌ನ ಜಯಲಕ್ಷ್ಮೀ ರಾಧಾಕೃಷ್ಣ ಪೈ ಮತ್ತು ಅರ್ಚನಾ ರಾಜೇಶ್ ಪೈ ಇವರೊಂದಿಗೆ ಮಳಿಗೆಯ ಮಾಲಕರ ಮಾತಾಪಿತರಾದ ಮೋಹಿನಿ.ಬಿ ಆರ್ಚಾಯ ಮತ್ತು ಕೆ.ಬಾಲಕೃಷ್ಣ ಆಚಾರ್ಯ ಹಾಗೂ ಜಯಂತಿ ಆಚಾರ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಗೋಲ್ಡ್ ಫೆಸ್ಟಿವಲ್ ಜ.21  ರಿಂದ ಆ.15  ರವರೆಗೆ ಗ್ರಾಹಕರು ಖರೀದಿಸುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳಿಗೆ ರೂ.2000 /- ಒಂದರಂತೆ ಗಿಫ್ಟ್ ಕೂಪನ್ ನೀಡಲಾಗುವುದು ವಿಜೇತರಿಗೆ ಬಂಪರ್ ಬಹುಮಾನ 4 ಪವನ್ ಚಿನ್ನದ ಹಾರ, ಪ್ರಥಮ ಬಹುಮಾನ 3 ಪವನ್ ಚಿನ್ನದ ಚೈನ್, ದ್ವಿತಿಯ ಬಹುಮಾನ 1 ಪವನ್ ಚಿನ್ನದ ಬ್ರೇಸ್ಲೆಟ್ ತೃತೀಯ ಬಹುಮಾನ ಶುದ್ದ ಚಿನ್ನದ ಉಬ್ಬು ಚಿತ್ರ ನೀಡಲಾಗುವುದು. ಅಲ್ಲದೆ ಶ್ರೀ ಧನಲಕ್ಷ್ಮೀ ಸ್ವರ್ಣನಿಧಿ ಎಂಬ ಸ್ಕೀಂ ಜಾರಿಯಲ್ಲಿದ್ದು ಇದರಲ್ಲಿ ಗ್ರಾಹಕರು ಕಟ್ಟಿದ ಹಣಕ್ಕೆ ಲೆಕ್ಕಾಚಾರ ಮಾಡಿ ಸಂಚಯಿಸಿಕೊಳ್ಳಲಾಗುವುದು. ಕನಿಷ್ಠ ರೂ. 500ರಿಂದ ಯಾವುಧೇ ಮಿತಿಯಿಲ್ಲದಂತೆ ತೊಡಗಿಸಬಹುದು. ಇದರೊಂದಿಗೆ ಮಳಿಗೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸುಲಭ ಕಂತುಗಳ ಗಿಫ್ಟ್ ಸ್ಕೀಂ ಚಾಲ್ತಿಯಲ್ಲಿರುತ್ತದೆ. ಮಾಸಿಕ ರೂ. 100/- ರಂತೆ ಕಟ್ಟುವ ಈ ಸ್ಕೀಮ್‌ನಲ್ಲಿ ಒಬ್ಬರು ಎಷ್ಟಾದರೂ ಸದಸ್ಯರಾಗಬಹುದು. ಪ್ರತಿ ತಿಂಗಳು ಡ್ರಾ ನಡೆದು ವಿಜೇತರು ಮುಂದಕ್ಕೆ ಕಂತು ಕಟ್ಟಬೇಕಾಗಿರುವುದಿಲ್ಲ.
ಗೋಲ್ಡ್ ಫೆಸ್ಟಿವಲ್‌ನ ಡ್ರಾ ದೊಂದಿಗೆ ಒಂದು ವಿಶೇಷ ಡ್ರಾ ನಡೆಸಿ ಪ್ರತಿ ಗ್ರೂಪಿನ ಒಬ್ಬರಂತೆ ಅದೃಷ್ಟ ಶಾಲಿ ವಿಜೇತರನ್ನು ಆರಿಸಿ ಬಹುಮಾನ ನೀಡಲಾಗುವುದು. ಎಂದು ಮಾಲಕರಾದ ಕೆ.ರಮೇಶ್ ಕುಮಾರ್ ತಿಳಿಸುತ್ತಾ ಗ್ರಾಹಕರ ಸಹಕಾರ ಪ್ರೋತ್ಸಾಹಗಳಿಗೆ ಕೃತಜ್ಞತೆ ಸಲ್ಲಿಸುತ್ತಾ ಮುಂದಕ್ಕೂ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ರೂಪಕಲಾ ಆರ್. ಕುಮಾರ್, ಸಹೋದರ ಕೆ. ರಾಜೇಶ್ ಕುಮಾರ್, ಮಾವ ಗಣೇಶ್ ಎಂ ಕಾವಲ್, ಪ್ರತಿಮಾ ಆಚಾರ್ಯ, ಗ್ರಾಹಕ ವಿಶ್ವನಾಥ ಶೆಟ್ಟಿಗಾರ್ ಇತರ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.