ನಡ: ಅಭಿನಂದನಾ ಕಾರ್ಯಕ್ರಮ

ನಡ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಡ- ಕನ್ಯಾಡಿ ಹಾಗೂ ಯುವ ವೇದಿಕೆಯ ಮಾಸಿಕ ಸಭೆಯು ಅಧ್ಯಕ್ಷ  ಪದ್ಮನಾಭ ಗೌಡ ಹಾಗೂ ಯುವ ವೇದಿಕೆಯ ಅಧ್ಯಕ್ಷ ವಸಂತ ಗೌಡ ಕೊಯ ಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ  ಮೋಹನ್ ಗೌಡ ಕೊಯ್ಯೂರು, ತಾಲೂಕು ಗೌಡರ ಸಂಘದ ನಿರ್ದೇಶಕ ಬಾಲಕೃಷ್ಣ ಗೌಡ ಬಿ , ಯುವ ತಾಲೂಕು ವೇದಿಕೆ ಕಾರ್ಯದರ್ಶಿ ವಿನಯಚಂದ್ರ ಸೇನರ ಬೆಟ್ಟು , ಉಜಿರೆ ಗ್ರಾಮ ಸಮಿತಿ ಸದಸ್ಯ ರಮೇಶ್ ಪೈಲಾರ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿಇತ್ತೀಚೆಗೆ ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳ ಚುನಾವಣೆಯಲ್ಲಿ ಆಯ್ಕೆಯಾದ ಕರುಣಾಕರ ಗೌಡ , ಜಯಂತ ಗೌಡ , ಚಂದ್ರಹಾಸ ಗೌಡ, ಜನಾರ್ಧನ ಗೌಡ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಸಂಘದ ನಿರ್ದೇಶಕ  ಶ್ರೀನಾಥ್ ಕೆ ಎಂ ಅವರು ಅಭಿನಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು .ಯುವ ವೇದಿಕೆ ಅಧ್ಯಕ್ಷ ವಸಂತ ಗೌಡ ಸ್ವಾಗತಿಸಿ, ಗ್ರಾಮ ಸಮಿತಿ ಕಾರ್ಯದರ್ಶಿ  ಜಯಂತ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.