HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪಾರ್‍ಪಿಕಲ್ಲು ಸಮೀಪ ವಾಹನ ಅಪಘಾತ : ಸ್ಕೂಟಿ ಸವಾರ ಸಾವು

 ಧರ್ಮಸ್ಥಳ ಕಡೆಗೆ ಬರುತ್ತಿದ್ದ ಸ್ಕೂಟಿಯೊಂದಕ್ಕೆ ಪಾರ್‍ಪಿಕಲ್ಲು ಸಮೀಪ ವಾಹನವೊಂದು ಡಿಕ್ಕಿಯಾಗಿ ಸ್ಕೂಟಿಯಲ್ಲಿದ್ದ ಹತ್ಯಡ್ಕ ಗ್ರಾಮದ ಮುದ್ದಿಗೆಯ ಸೇಸಪ್ಪ ಶೆಟ್ಟಿ (65.ವ) ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಜ.21 ರಂದು ನಡೆದಿದೆ.

ಡಿಕ್ಕಿಯಾದ ರಭಸಕ್ಕೆ ಸ್ಕೂಟಿ ಸವಾರರ ತಲೆಗೆ ಗಂಭೀರ ಗಾಯಗಳಾಗಿತ್ತು. ಮುದ್ದಿಗೆಯ ತನ್ನ ಮನೆಯಿಂದ ಕರೆಂಟ್ ಬಿಲ್ ಪಾವತಿಸಲೆಂದು ತನ್ನ ಸ್ಕೂಟಿಯಲ್ಲಿ ಧರ್ಮಸ್ಥಳದ ಕಡೆಗೆ ಪ್ರಯಾಣಿಸುತ್ತ ಸಂದರ್ಭ ಎದುರಿನಿಂದ ಬಂದ ಯಾವುದೋ ವಾಹನ ಡಿಕ್ಕಿಹೊಡೆಯಿತೆನ್ನಲಾಗಿದ್ದು , ಡಿಕ್ಕಿಹೊಡೆದ ವಾಹನ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದೆ. ಧರ್ಮಸ್ಥಳ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.